ಕದ್ರಿ ದೇವಳ ವ್ಯವಸ್ಥಾಪನಾ ಸಮಿತಿ ಸದಸ್ಯ ದಯಾಕರ್ ಮೆಂಡನ್ ನಿಧನ
ಮಂಗಳೂರು, ನ.14: ಕದ್ರಿ ಮಂಜುನಾಥ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿದ್ದ ಉಳ್ಳಾಲ ನಿವಾಸಿ, ಬೋಳಾರ ಗ್ರಾಮದ ದಯಾಕರ ಮೆಂಡನ್ (71) ಮಂಗಳವಾರ ನಿಧನರಾದರು.
ದೇವಳದಲ್ಲಿ 20 ವರ್ಷಗಳ ಕಾಲ ವ್ಯವ್ಯಸ್ಥಾಪನಾ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿರುವ ಮೃತರು ಪತ್ನಿ ಮತ್ತು ಇಬ್ಬರು ಪುತ್ರರು ಅಪಾರ ಬಂಧು-ಬಳಗ ಅಗಲಿದ್ದಾರೆ.
ಕಾಂಗ್ರೆಸ್ ಪಕ್ಷದ ಹಿರಿಯ ಕಾರ್ಯಕರ್ತ, ಮೊಗವೀರ ಮಹಾಜನ ಸಂಘದ ಪಧಾಧಿಕಾರಿ, ಮೊಗವೀರ 14 ಪಟ್ಣ ಸಂಯುಕ್ತ ಸಭೆಯ ಉಪಾಧ್ಯಕ್ಷ, ಮಂಗಳೂರು 16 ಪಟ್ಣ ಮೀನುಗಾರಿಕಾ ಸೌಹಾರ್ದ ವಿವಿಧೋದ್ಧೇಶ ಸಹಕಾರಿ ಸಂಘದ ಮಾಜಿ ನಿರ್ದೇಶಕ, ಉರ್ವ ಮಾರಿಯಮ್ಮ ದೇವಸ್ಥಾನದ ಸಕ್ರಿಯ ಕಾರ್ಯಕರ್ತರಾಗಿದ್ದ ಅವರು, ಮಾಜಿ ಸಚಿವರಾದ ಬಿ.ಜನಾರ್ದನ ಪೂಜಾರಿ, ಬಿ.ರಮಾನಾಥ ರೈ, ವಸಂತ ಸಾಲ್ಯಾನ್, ಪ್ರಮೋದ್ ಮಧ್ವರಾಜ್ ಮೊದಲಾದವರ ನಿಕಟವರ್ತಿಯಾಗಿದ್ದರು.
ಮೆಂಡನ್ ನಿಧನಕ್ಕೆ ಕದ್ರಿ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎ.ಜೆ. ಶೆಟ್ಟಿ ಸಹಿತ ಸದಸ್ಯರು ಹಾಗೂ ಎಸ್.ಪ್ರದೀಪ ಕುಮಾರ ಕಲ್ಕೂರ ತಮ್ಮ ಸಂತಾಪವನ್ನು ವ್ಯಕ್ತಪಡಿಸಿದರು.
ಮಾಜಿ ಸಚಿವರಾದ ರಮಾನಾಥ ರೈ, ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಜೆ.ಆರ್. ಲೋಬೊ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಹರಿನಾಥ್ ಜೋಗಿ, ಕೆಎಫ್‌ಡಿಸಿ ಮಾಜಿ ಅಧ್ಯಕ್ಷ ನಿತಿನ್‌ಕುಮಾರ್ ಮೊದಲಾದ ಗಣ್ಯರು ಅಂತಿಮದರ್ಶನ ಗೈದರು.





