ರೊಹಿಂಗ್ಯಾ ವಾಪಸಾತಿ ಯೋಜನೆ ನಿಲ್ಲಿಸಿ
ಬಾಂಗ್ಲಾಕ್ಕೆ ವಿಶ್ವಸಂಸ್ಥೆಯ ಮಾನವಹಕ್ಕು ಹೈಕಮಿಶನರ್ ಒತ್ತಾಯ
ಜಿನೇವ, ನ. 14: 2,200ಕ್ಕೂ ಅಧಿಕ ರೊಹಿಂಗ್ಯಾ ಮುಸ್ಲಿಮರನ್ನು ಮ್ಯಾನ್ಮಾರ್‌ಗೆ ವಾಪಸ್ ಕಳುಹಿಸುವ ಯೋಜನೆಯನ್ನು ಸ್ಥಗಿತಗೊಳಿಸುವಂತೆ ವಿಶ್ವಸಂಸ್ಥೆಯ ಮಾನವಹಕ್ಕುಗಳ ಮುಖ್ಯಸ್ಥರು ಮಂಗಳವಾರ ಬಾಂಗ್ಲಾದೇಶವನ್ನು ಒತ್ತಾಯಿಸಿದ್ದಾರೆ.
ಮ್ಯಾನ್ಮಾರ್‌ನಲ್ಲಿ ಅಲ್ಪಸಂಖ್ಯಾತ ರೊಹಿಂಗ್ಯಾ ಸಮುದಾಯದ ವಿರುದ್ಧದ ದೌರ್ಜನ್ಯ ಮುಂದುವರಿದಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಮಾನವಹಕ್ಕುಗಳ ಹೈಕಮಿಶನರ್ ಈ ಹೇಳಿಕೆ ನೀಡಿದ್ದಾರೆ.
ಕಳೆದ ವರ್ಷ ಮ್ಯಾನ್ಮಾರ್ ಸೇನೆ ನಡೆಸಿದ ದಮನ ಕಾರ್ಯಾಚರಣೆಗೆ ಬೆದರಿ 7 ಲಕ್ಷಕ್ಕೂ ಅಧಿಕ ಅಲ್ಪಸಂಖ್ಯಾತ ರೊಹಿಂಗ್ಯಾ ಮುಸ್ಲಿಮರು ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈದಿರುವುದನ್ನು ಸ್ಮರಿಸಬಹುದಾಗಿದೆ.
ರೊಹಿಂಗ್ಯಾ ನಿರಾಶ್ರಿತರನ್ನು ಗುರುವಾರದಿಂದ ವಾಪಸ್ ಕಳುಹಿಸಲು ಬಾಂಗ್ಲಾದೇಶ ಯೋಜನೆ ರೂಪಿಸಿದೆ.
ಆದರೆ, ಈ ಯೋಜನೆ ರೊಹಿಂಗ್ಯಾ ಶಿಬಿರಗಳಲ್ಲಿ ಕಳವಳ ಸೃಷ್ಟಿಸಿದೆ. ಮೊದಲ ತಂಡಗಳಲ್ಲಿ ವಾಪಸಾಗಬೇಕಾಗಿದ್ದ ಕೆಲವು ಕುಟುಂಬಗಳು ಶಿಬಿರಗಳಿಂದ ಪಲಾಯನಗೈದಿವೆ.
Next Story