ಮಟನ್ ಬೇಯಿಸಲು ಪತ್ನಿ ತಡ ಮಾಡಿದ್ದಕ್ಕಾಗಿ ಕೋಪಗೊಂಡು 4 ವರ್ಷದ ಪುತ್ರಿಯನ್ನು ಹೊಡೆದು ಕೊಂದ!
ಪಾಟ್ನಾ, ನ.15: ಮಟನ್ ಬೇಯಿಸಲು ಪತ್ನಿ ತಡ ಮಾಡಿದರು ಎಂಬ ಕೋಪದಿಂದ ವ್ಯಕ್ತಿಯೊಬ್ಬ ತನ್ನ 4 ವರ್ಷದ ಪುತ್ರಿಯನ್ನು ಕೊಂದಿರುವ ಘಟನೆ ಬಿಹಾರದ ಪುರ್ನಿಯಾ ಜಿಲ್ಲೆಯಲ್ಲಿ ನಡೆದಿದೆ.
ಅಮೌರ್ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಫಕೀರ್ತೋಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿ ಶಂಭುಲಾಲ್ ಶರ್ಮಾನನ್ನು ಬಂಧಿಸಿದ್ದಾರೆ.
ಪತ್ನಿಯ ದೂರಿನ ಆಧಾರದಲ್ಲಿ ಶಂಭುಲಾಲ್ ನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪತ್ನಿ ಮಟನ್ ಬೇಯಿಸಲು ತಡ ಮಾಡಿದ್ದರಿಂದ ಕೋಪಗೊಂಡ ಶಂಭುಲಾಲ್ ಆಟವಾಡುತ್ತಿದ್ದ ಪುತ್ರಿಗೆ ಹೊಡೆಯಲು ಆರಂಭಿಸಿದ್ದಾನೆ. ಕೂಡಲೇ ಬಾಲಕಿ ಪ್ರಜ್ಞಾಹೀನಳಾಗಿ ಬಿದ್ದಿದ್ದಾಳೆ. ಮಗು ಅಪಾಯದಲ್ಲಿದೆ ಎನ್ನುವುದನ್ನು ಅರಿತ ಶಂಭುಲಾಲ್ ಪುತ್ರಿಯನ್ನು ಸಮೀಪದ ಆಸ್ಪತ್ರೆಗೆ ಕೊಂಡೊಯ್ದಿದ್ದು, ಆಕೆ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
Next Story