ದುಬಾರಿ ಕ್ಯಾಮೆರಾಗಳನ್ನು ಬಾಡಿಗೆಗೆ ಪಡೆದು ವಂಚನೆ: ಆರೋಪಿ ಬಂಧನ
ಬೆಂಗಳೂರು, ನ.15: ಆನ್ಲೈನ್ನಲ್ಲಿ ದುಬಾರಿ ಕ್ಯಾಮೆರಾಗಳನ್ನು ಬಾಡಿಗೆಗೆ ಪಡೆದು ವಂಚಿಸುತ್ತಿದ್ದ ಆರೋಪಿಯನ್ನ ಸಂಜಯನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶ ಮೂಲದ ಮಹೇಶ್ ಬಂಧಿತ ಆರೋಪಿ. ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಸಂಜಯ್ ನಗರ ವ್ಯಾಪ್ತಿಯಲ್ಲಿ ಹೆಚ್ಚಾಗಿ ಆನ್ಲೈನ್ನಲ್ಲಿ ಹೆಚ್ಚಿನ ಬಾಡಿಗೆಯ ಆಮಿಷ ನೀಡಿ ಒಮ್ಮೆಗೆ ಮೂರು-ನಾಲ್ಕು ಕ್ಯಾಮೆರಾಗಳನ್ನು ಬಾಡಿಗೆಗೆ ಪಡೆದು, ಹಣ ಹಾಗೂ ಕ್ಯಾಮೆರಾ ಕೊಡದೆ ವಂಚಿಸುತ್ತಿದ್ದ ಎನ್ನಲಾಗಿದೆ.
ಇತ್ತೀಚೆಗೆ ಮಹಾಲಕ್ಷ್ಮಿ ಬಡಾವಣೆಯ ವ್ಯಕ್ತಿಯೊಬ್ಬರಿಂದ ಆರು ಲಕ್ಷ ಬೆಲೆ ಬಾಳುವ ನಿಕಾನ್ ಹಾಗೂ ಕ್ಯಾನನ್ ಕ್ಯಾಮರಾಗಳನ್ನು ಪಡೆದಿದ್ದ ನಂತರ ಕ್ಯಾಮೆರಾ ಹಿಂದಿರುಗಿಸದೇ ವಂಚಿಸಿದ್ದ. ಈ ಸಂಬಂಧ ಆರೋಪಿ ಮಹೇಶ್ ವಿರುದ್ಧ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಉತ್ತರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋರ್ ಮಾರ್ಗದರ್ಶನದಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸಿ, ಲಕ್ಷಾಂತರ ರೂ. ವೌಲ್ಯದ ಹಲವು ಕ್ಯಾಮೆರಾಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.