ತೈಲೋತ್ಪನ್ನಗಳ ದರದಲ್ಲಿ ಮತ್ತೆ ಇಳಿಕೆ
![ತೈಲೋತ್ಪನ್ನಗಳ ದರದಲ್ಲಿ ಮತ್ತೆ ಇಳಿಕೆ ತೈಲೋತ್ಪನ್ನಗಳ ದರದಲ್ಲಿ ಮತ್ತೆ ಇಳಿಕೆ](/images/placeholder.jpg)
ಹೊಸದಿಲ್ಲಿ, ನ.16: ಇದೀಗ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿರಂತರ ಇಳಿಮುಖವಾಗುತ್ತಿದ್ದು, ಶುಕ್ರವಾರ ಪೆಟ್ರೋಲ್ ಬೆಲೆ ಲೀಟರ್ಗೆ 0.18 ಪೈಸೆ, ಡೀಸೆಲ್ ಬೆಲೆ ಲೀಟರ್ಗೆ 0.16 ಪೈಸೆ ಕಡಿಮೆಯಾಗಿದೆ. ದಿಲ್ಲಿಯಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 77.10 ರೂ, ಡೀಸೆಲ್ ಬೆಲೆ 71.93 ರೂ. ಆಗಿದ್ದರೆ ಮುಂಬೈಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ 82.62 ರೂ. ಹಾಗೂ 75.36 ರೂ. ಆಗಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲದ ದರದಲ್ಲಿ ಭಾರೀ ಹೆಚ್ಚಳವಾದ ಹಿನ್ನೆಲೆಯಲ್ಲಿ ಕಳೆದ ಆಗಸ್ಟ್ ಸೆಪ್ಟೆಂಬರ್ ಮತ್ತು ಅಕ್ಟೋಬರ್ನಲ್ಲಿ ದೇಶದಲ್ಲಿ ತೈಲೋತ್ಪನ್ನ ಬೆಲೆ ಅಧಿಕವಾಗಿತ್ತು. ಆದರೆ ಕಳೆದ ಎರಡು ವಾರಗಳಿಂದ ದರ ನಿರಂತರವಾಗಿ ಕಡಿಮೆಯಾಗುತ್ತಿದೆ.
Next Story