ಸಿಎನ್ ಎನ್ ಪತ್ರಕರ್ತನಿಗೆ ಶ್ವೇತಭವನಕ್ಕೆ ತಾತ್ಕಾಲಿಕ ಪಾಸ್ ನೀಡಲು ನ್ಯಾಯಾಧೀಶರ ಆದೇಶ
ಟ್ರಂಪ್ ಆಡಳಿತಕ್ಕೆ ಹಿನ್ನಡೆ
ವಾಷಿಂಗ್ಟನ್, ನ.16: ಸಿಎನ್ ಎನ್ ಪತ್ರಕರ್ತ ಜಿಮ್ ಅಕೋಸ್ಟರಿಗೆ ತಾತ್ಕಾಲಿಕವಾಗಿ ಶ್ವೇತಭವನದ ಪಾಸ್ ನೀಡುವಂತೆ ಅಮೆರಿಕದ ನ್ಯಾಯಾಧೀಶರು ಆದೇಶಿಸಿದ್ದು, ಟ್ರಂಪ್ ಆಡಳಿತಕ್ಕೆ ಕೊಂಚ ಹಿನ್ನಡೆಯಾಗಿದೆ.
ಶ್ವೇತಭವನಕ್ಕೆ ಪತ್ರಕರ್ತರನ್ನು ನಿರ್ಬಂಧಿಸಲು ಕೆಲವು ಪ್ರಕ್ರಿಯೆಗಳಿವೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.
ಜಿಮ್ ಅಕೋಸ್ಟಗೆ ಶ್ವೇತಭವನಕ್ಕೆ ಪ್ರವೇಶ ನಿರಾಕರಿಸಿರುವುದನ್ನು ಪ್ರಶ್ನಿಸಿ ಸುದ್ದಿವಾಹಿನಿ ಸಿಎನ್ಎನ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಶ್ವೇತಭವನದ ಹಲವಾರು ಉನ್ನತ ಅಧಿಕಾರಿಗಳ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿತ್ತು.
Next Story