ಕ್ಯಾಲಿಫೋರ್ನಿಯ ಕಾಡ್ಗಿಚ್ಚು: ನಾಪತ್ತೆಯಾದವರ ಸಂಖ್ಯೆ 631ಕ್ಕೇರಿಕೆ
ಕ್ಯಾಲಿಫೋರ್ನಿಯ, ನ. 16: ಕ್ಯಾಲಿಫೋರ್ನಿಯದ ಅತ್ಯಂತ ಭೀಕರ ಕಾಡ್ಗಿಚ್ಚಿನ ಬಳಿಕ ನಾಪತ್ತೆಯಾದವರ ಸಂಖ್ಯೆ 631ಕ್ಕೆ ಏರಿದೆ ಎಂದು ಅಧಿಕಾರಿಗಳು ಗುರುವಾರ ಹೇಳಿದ್ದಾರೆ.
ಅದೇ ವೇಳೆ, ಏಳು ಮಂದಿಯ ಅವಶೇಷಗಳನ್ನು ಶೋಧ ಸಿಬ್ಬಂದಿ ಗುರುವಾರ ಪತ್ತೆಹಚ್ಚಿದ್ದಾರೆ.
ಒಂದು ವಾರದ ಹಿಂದೆ ಬೆಂಕಿ ಹರಡಿದಾಗ ಮಾಡಲಾದ ತುರ್ತು ಕರೆಗಳನ್ನು ಪೊಲೀಸರು ಪರಿಶೀಲಿಸಿದ ಬಳಿಕ, ನಾಪತ್ತೆಯಾದವರ ಸಂಖ್ಯೆ ಒಮ್ಮೆಲೆ ದುಪ್ಪಟ್ಟುಗೊಂಡಿದೆ ಎಂದು ಬಟ್ ಕೌಂಟಿ ಶೆರಿಫ್ ಕೋರಿ ಹಾನಿಯ ತಿಳಿಸಿದರು.
Next Story