ದುಬಾರಿ ಬೌಲರ್ ಜೈದೇವ್ ಉನದ್ಕಟ್ ಕೈಬಿಟ್ಟ ರಾಜಸ್ಥಾನ
ಐಪಿಎಲ್
ಜೈಪುರ, ನ.16: ಈ ವರ್ಷಾರಂಭದಲ್ಲಿ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಗರಿಷ್ಠ ಮೊತ್ತಕ್ಕೆ (11.3 ಕೋ.ರೂ.)ಹರಾಜಾಗಿದ್ದ ಭಾರತದ ಆಟಗಾರ ಎನಿಸಿಕೊಂಡಿದ್ದ ಮಧ್ಯಮ ವೇಗದ ಬೌಲರ್ ಜೈದೇವ್ ಉನದ್ಕಟ್ರನ್ನು ರಾಜಸ್ಥಾನ ರಾಯಲ್ಸ್ ತಂಡ ಮುಂಬರುವ ಐಪಿಎಲ್ನಿಂದ ಕೈಬಿಡುವ ಮೂಲಕ ಅಚ್ಚರಿ ಮೂಡಿಸಿದೆ.
ಜೈದೇವ್ ಉನದ್ಕಟ್ಗೆ ಹರಾಜಿನ ವೇಳೆ ನೀಡಿದ್ದ ಗರಿಷ್ಠ ಮೊತ್ತವೇ ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ.
‘‘ಜೈದೇವ್ ಕೊಡುಗೆಯನ್ನು ಅವಲೋಕಿಸಿದ ಬಳಿಕ ಹರಾಜಿನ ಮೊತ್ತಕ್ಕೆ ತಕ್ಕಂತೆ ಪ್ರದರ್ಶನ ನೀಡುವುದು ಅವರಿಗೆ ಅತ್ಯಂತ ಒತ್ತಡವಾಗಿ ಪರಿಣಿಮಿಸಿರುವುದು ಗಮನಕ್ಕೆ ಬಂದಿದೆ. ಹಾಗಾಗಿ ಅವರನ್ನು ತಂಡದಿಂದ ಕೈಬಿಡುವುದೇ ಉತ್ತಮ ಎಂದು ತೀರ್ಮಾನಿಸಿದ್ದೇವೆ’’ ಎಂದು ರಾಯಲ್ಸ್ ಕ್ರಿಕೆಟ್ ಮುಖ್ಯಸ್ಥ ಝುಬಿನ್ ಭರೂಚಾ ಹೇಳಿದ್ದಾರೆ. ಕಳೆದ ಆವೃತ್ತಿಯ ಐಪಿಎಲ್ನಲ್ಲಿ ಜೈದೇವ್ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. 15 ಪಂದ್ಯಗಳಲ್ಲಿ ಕೇವಲ 11 ವಿಕೆಟ್ಗಳನ್ನು ಉರುಳಿಸಿದ್ದರು.
Next Story