ಗುಜರಾತ್, ಜೆಪುರಕ್ಕೆ ಜಯ
ಪೊ್ರಕಬಡ್ಡಿ ಲೀಗ್
ಅಹ್ಮದಾಬಾದ್, ನ.16: ಗುಜರಾತ್ ಫೋರ್ಚುನ್ಜೈಂಟ್ಸ್ ಹಾಗೂ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡಗಳು ಪ್ರೊ ಕಬಡ್ಡಿ ಲೀಗ್ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಜಯ ದಾಖಲಿಸಿವೆ.
ಗುಜರಾತ್ ತಂಡ ಪ್ರಪಂಜನ್(9 ಅಂಕ)ನೆರವಿನಿಂದ ಬಂಗಾಳ ವಾರಿಯರ್ಸ್ ತಂಡವನ್ನು 35-23 ಅಂತರದಿಂದ ಮಣಿಸಿತು.
ದಿನದ ಮತ್ತೊಂದು ಪಂದ್ಯದಲ್ಲಿ ಜೈಪುರ ತಂಡ ಯುಪಿ ಯೋಧಾ ತಂಡವನ್ನು 45-28 ಅಂತರದಿಂದ ಸೋಲಿಸಿ ಆಘಾತ ನೀಡಿತು. ದೀಪಕ್ ಹೂಡ(10 ಅಂಕ)ಹಾಗೂ ಅಜಿಂಕ್ಯ ಪವಾರ್(9) ಜೈಪುರ ಗೆಲುವಿಗೆ ನೆರವಾದರು. ಯುಪಿ ಪರ ಕನ್ನಡಿಗ ರಿಶಾಂಕ್ ದೇವಾಡಿಗ 7 ಅಂಕ ಗಳಿಸಿದರು.
Next Story