ಯಡಿಯೂರಪ್ಪ-ರೆಡ್ಡಿ ಭೇಟಿಗೆ ಮಹತ್ವವಿಲ್ಲ: ಝಮೀರ್

ಉಡುಪಿ, ನ.17: ಬಿ.ಜನಾರ್ದನ ರೆಡ್ಡಿ ಅವರು ಈಗಲೂ ಬಿಜೆಪಿಯಲ್ಲೇ ಇದ್ದಾರೆ. ಅವರು ತಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದಕ್ಕೆ ಯಾವುದೇ ಮಹತ್ವವಿಲ್ಲ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ, ಅಲ್ಪಸಂಖ್ಯಾತರ ಮತ್ತು ಲಕ್ಫ್ ಇಲಾಖೆ ಸಚಿವ ಝಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಇಂದು ಉಡುಪಿ ಜಿಲ್ಲೆಗೆ ಭೇಟಿ ನೀಡಿದ ಝಮೀರ್ ಅಹ್ಮದ್ ಅವರು ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಆದರೆ ಪಕ್ಷಕ್ಕೂ, ರೆಡ್ಡಿಗೂ ಸಂಬಂಧವಿಲ್ಲ ಎಂದು ಬಿಜೆಪಿಗರು ಹೇಳುತ್ತಾರಲ್ಲ ಎಂದು ಪ್ರಶ್ನಿಸಿದಾಗ, ಬಿಜೆಪಿ ಯುಟರ್ನ್ ಹೊಡೆಯುವುದಕ್ಕೆ ಫೇಮಸ್ ಇದ್ದಾರೆ. ಚೆನ್ನಾಗಿದ್ರೆ ಜೊತೆಗಿರ್ತಾರೆ. ಕೆಟ್ಟ ಗಳಿಗೆ ಬಂದಾಗ ಹಿಂದೇಟು ಹೊಡಿಯೋದು ಬಿಜೆಪಿಗೆ ಮಾಮೂಲು ಎಂದರು.
ಯಡಿಯೂರಪ್ಪ ಮತ್ತು ರೆಡ್ಡಿ ಭೇಟಿಯಿಂದ ಸರಕಾರಕ್ಕೇನಾದರೂ ಅಪಾಯ ಎದುರಾಗುವುದೇ ಎಂದು ಕೇಳಿದಾಗ, ಈ ಸಮ್ಮಿಶ್ರ ಸರಕಾರ ಐದು ವರ್ಷ ಆಡಳಿತವನ್ನು ಪೂರ್ಣಗೊಳಿಸುತ್ತದೆ. ಕುಮಾರಸ್ವಾಮಿ ಐದು ವರ್ಷ ಮುಖ್ಯಮಂತ್ರಿ ಆಗಿರ್ತಾರೆ ಎಂದರು.
ಬಿಜೆಪಿಯವರಿಗೆ ತಿಪ್ಪರಲಾಗ ಹಾಕಿದ್ರೂ ಏನೂ ಮಾಡೋಕಾಗಲ್ಲ. ಪಾಪ ಯಡಿಯೂರಪ್ಪ ಮುಖ್ಯಮಂತ್ರಿಯ ಕನಸು ಕಾಣ್ತಾ ಇರುವುದಲ್ಲ. ಅವರು ಹಗಲುಗನಸು ಕಾಣ್ತಾ ಇದ್ದಾರೆ. ಯಡಿಯೂರಪ್ಪರ ಆಪ್ತರೇ ನನಗೆ ಈ ಮಾತು ಹೇಳಿದ್ದಾರೆ. ಯಡಿಯೂರಪ್ಪ ಮೂರ್ನಾಲ್ಕು ತಿಂಗಳಿನಿಂದ ನಿದ್ದೇನೆ ಮಾಡ್ತಾ ಇಲ್ವಂತೆ ಎಂದು ಝಮೀರ್ ನುಡಿದರು.
ಮೈಸೂರಿನ ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೇಯರ್, ಉಪಮೇಯರ್ ಸ್ಥಾನ ಗೆದ್ದಿರುವ ಬಗ್ಗೆ ಪ್ರಶ್ನಿಸಿದಾಗ, ಕೇವಲ 37 ಸ್ಥಾನ ಗೆದ್ದ ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನವನ್ನು ನಾವು ನೀಡಿರುವಾಗ ಅವರು ಮೇಯರ್ ಸ್ಥಾನ ಕೊಡೋದು ಯಾವ ದೊಡ್ಡ ವಿಚಾರ ಅಲ್ಲ. ಆದರೆ ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಯಾವುದೇ ಭಿನ್ನಮತ ಇಲ್ಲ ಎಂದವರು ಸ್ಪಷ್ಟ ಪಡಿಸಿದರು.
ಮಂದಿರ-ಮಸೀದಿ ಆಗಲಿ: ಬಿಜೆಪಿ ಮತ್ತೆ ರಾಮಮಂದಿರ ವಿಚಾರವನ್ನು ಕೈಗೆತ್ತಿಕೊಂಡಿರುವ ಬಗ್ಗೆ ಪ್ರಶ್ನಿಸಿದಾಗ, ಕಳೆದ ನಾಲ್ಕೂವರೆ ವರ್ಷಗಳಲ್ಲಿ ಅವರಿಗೆ ರಾಮಮಂದಿರದ ವಿಚಾರ ಜ್ಞಾಪಕಕ್ಕೆ ಬಂದಿರಲಿಲ್ಲ. ಈಗ ಚುನಾವಣೆ ಹತ್ತಿರ ಬರುತಿದ್ದಂತೆ ಅವರಿಗೆ ಮತ್ತೆ ರಾಮಮಂದಿರದ ವಿಚಾರ ನೆನಪಾಗುತ್ತಿದೆ ಎಂದು ವ್ಯಂಗ್ಯವಾಡಿದರು.
ರಾಮ ಮಂದಿರ ನಿರ್ಮಾಣಕ್ಕೆ ಮುಸ್ಲಿಮರು ಎಂದೂ ವಿರೋಧ ಸೂಚಿಸಿಲ್ಲ. ನಮಗೆ ಮಂದಿರವೂ ಬೇಕು. ಮಸೀದಿಯೂ ಬೇಕು, ಸರ್ವಧರ್ಮೀಯರು ಸಹೋದರರಂತೆ ಸೌಹಾರ್ದತೆಯಿಂದ ಬದುಕುವ ದೇಶ ಇನ್ನೊಂದಿಲ್ಲ ಎಂದರು.
ರಾಮ ಮಂದಿರ ನಿರ್ಮಾಣಕ್ಕೆ ಮುಸ್ಲಿಮರು ಎಂದೂ ವಿರೋಸೂಚಿಸಿಲ್ಲ.ನಮಗೆಮಂದಿರವೂಬೇಕು.ಮಸೀದಿಯೂಬೇಕು,ಸರ್ವರ್ಮೀಯರು ಸಹೋದರರಂತೆ ಸೌಹಾರ್ದತೆಯಿಂದ ಬದುಕುವ ದೇಶ ಇನ್ನೊಂದಿಲ್ಲ ಎಂದರು. ವಕ್ಫ್ ಆಸ್ತಿ ಬಗ್ಗೆ ಸರ್ವೆ: ರಾಜ್ಯದಲ್ಲಿರುವ ಸಾವಿರಾರು ಎಕರೆ ವಕ್ಫ್ ಆಸ್ತಿ ಒತ್ತುವರಿ ಯಾಗಿರುವ ಆರೋಪದ ಬಗ್ಗೆ ಪ್ರಶ್ನಿಸಿದಾಗ, ಇಲಾಖೆ ಒಂದು ತಂಡದ ಮೂಲಕ ಈ ಬಗ್ಗೆ ತಾಲೂಕುವಾರು ಸಮಗ್ರ ಸರ್ವೆ ನಡೆಯುತ್ತಿದೆ. ಇನ್ನು 15 ದಿನ, ಒಂದು ತಿಂಗಳೊಳಗೆ ಈ ಬಗ್ಗೆ ಎಲ್ಲಾ ಮಾಹಿತಿಗಳನ್ನು ನೀಡುತ್ತೇನೆ. ನಿಜ ಹೇಳಬೇಕೆಂದರೆ ವಕ್ಫ್ ಆಸ್ತಿಯನ್ನು ಸರಿಯಾಗಿ ಬಳಸಿಕೊಂಡರೆ, ನಾವು ಸರಕಾರದಿಂದ ಯಾವುದೇ ದುಡ್ಡು ಪಡೆಯಬೇಕಾಗಿಲ್ಲ, ಸರಕಾರಕ್ಕೇ ನೀಡಬಹುದಾಗಿದೆ ಎಂದರು.
ಕಾರ್ಯಕರ್ತರಿಗೆ ಕರೆ: ಬಳಿಕ ಕಾಂಗ್ರೆಸ್ ಭವನದಲ್ಲಿ ನೆರೆದ ಕಾರ್ಯಕರ್ತರು ಹಾಗೂ ನಾಯಕರನ್ನುದ್ದೇಶಿಸಿ ಮಾತನಾಡಿದ ಸಚಿವರು, ಶೀಘ್ರದಲ್ಲೇ ಬರುವ ಲೋಕಸಭಾ ಚುನಾವಣೆಗೆ ಸಿದ್ಧರಾಗುವಂತೆ, ಕಾರ್ಯಕರ್ತರು ಒಗ್ಗಟ್ಟಿನಿಂದ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ, ನಾಯಕರಾದ ಜಿ.ಎ.ಬಾವಾ, ವಿನಯಕುಮಾರ್ ಸೊರಕೆ, ಎಂ.ಎ.ಗಫೂರ್, ವರೋನಿಕಾ ಕರ್ನೇಲಿಯೊ, ಡಾ.ಸುನೀತಾ ಶೆಟ್ಟಿ, ರಮೇಶ್ ಕಾಂಚನ್, ಇಸ್ಮಾಯಿಲ್ ಆತ್ರಾಡಿ, ಕೆ.ಪಿ.ಇಬ್ರಾಹಿಂ ಮುಂತಾದವರು ಉಪಸ್ಥಿತರಿದ್ದರು.