Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಪೊಲೀಸರಿಂದ, ಗೂಂಡಾಗಳಿಂದ ಸದಾ ಶೋಷಣೆಗೆ...

ಪೊಲೀಸರಿಂದ, ಗೂಂಡಾಗಳಿಂದ ಸದಾ ಶೋಷಣೆಗೆ ಒಳಗಾದವಳು ನಾನು: ಎ. ರೇವತಿ

ಆಳ್ವಾಸ್ ನುಡಿಸಿರಿಯಲ್ಲಿ 'ನನ್ನ ಕಥೆ ನಿಮ್ಮ ಜೊತೆ' ಕಾರ್ಯಕ್ರಮ

ವಾರ್ತಾಭಾರತಿವಾರ್ತಾಭಾರತಿ17 Nov 2018 9:36 PM IST
share
ಪೊಲೀಸರಿಂದ, ಗೂಂಡಾಗಳಿಂದ ಸದಾ ಶೋಷಣೆಗೆ ಒಳಗಾದವಳು ನಾನು: ಎ. ರೇವತಿ

ಮೂಡುಬಿದಿರೆ, ನ. 17: ನಿಜವಾಗಿಯೂ ಈ ಸಮಾಜ ಸರಿಯಾಗಿಲ್ಲ, ಬಡವರಿಗೆ ಈ ಸಮಾಜದಲ್ಲಿ ಬದುಕು ಸಾಗಿಸುವುದು ದುಸ್ತರವಾಗಿರುವುದಲ್ಲದೆ ನನ್ನ ಈ ಭಾವನಾತ್ಮಕ ಮತ್ತು ದೈಹಿಕ ವೈಫಲ್ಯಗಳನ್ನು ಗಮನಿಸಿಕೊಳ್ಳುವಲ್ಲಿ ಪೊಲೀಸರಿಂದಲೂ, ಗೂಂಡಾಗಳಿಂದಲೂ ಸದಾ ಶೋಷಣೆಗೆ ಒಳಗಾದವಳು ನಾನು ಎಂದು ಮಂಗಳಮುಖಿ ರೇವತಿ, ಚೆನ್ನೈ ಖೇದ ವ್ಯಕ್ತ ಪಡಿಸಿದರು.

ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ಆಳ್ವಾಸ್ ನುಡಿಸಿರಿಯಲ್ಲಿ ನನ್ನಕಥೆ ನಿಮ್ಮ ಜೊತೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ತಮ್ಮ ಜೀವನದ ಕರಾಳ ಮುಖಗಳನ್ನು ಪ್ರೇಕ್ಷಕರ ಮಂದೆ ತೆರೆದಿಟ್ಟರು.

"ತಮಿಳುನಾಡಿನ ಮೂಲದವಳಾದ ನಾನು ಕನ್ನಡದಲ್ಲೇ ಮಾತಾಡುತ್ತೇನೆ, ತಪ್ಪಾದರೆ ಕ್ಷಮಿಸಬೇಕು" ಎಂದ ರೇವತಿ ಕನ್ನಡ ಪ್ರೇಮವನ್ನು ಮೆರೆಯುವ ಜೊತೆಗೆ ತಾನು ಜೀವನದಲ್ಲಿ ಮಂಗಳಮುಖಿಯಾಗಿ ಕಂಡುಂಡ ನೋವುಗಳನ್ನು ಪ್ರೇಕ್ಷಕರ ಮುಂದಿರಿಸಿದರು.

ಬಾಲ್ಯದಲ್ಲಿ ಶಾಲಾ ದಿನಗಳಲ್ಲಿ ಗುರುಗಳ ಮೂಲಕವೂ ತಾನು ಮಾನಸಿಕ ವೇದನೆಯನ್ನು ಅನುಭವಿಸಿದವಳು, ಸಹಪಾಠಿಗಳ ತುಂಟತನಕ್ಕೆ ಒಳಗಾದವಳು ಗಂಡಾಗಿ ಹುಟ್ಟಿ ಹೆಣ್ತನದ ಭಾವನೆಗಳನ್ನು ಇರಿಸಿಕೊಂಡ ನನ್ನ ಭಾವನೆಗಳಿಗೆ ಸ್ಪಂದಿಸುವವರಾರು ಇಲ್ಲ ಎಂಬ ಚಿಂತೆ, ಬೇಗುದಿಗೆ ಒಳಗಾದವಳು ನಾನು ಎಂದು ಅವರು ತಿಳಿಸಿದರು.

ಪ್ರೌಢ ಶಾಲಾ ದಿನಗಳ ಸಂದರ್ಭ ತಾನು ಗಂಡಾಗಿ ಓರ್ವ ಹುಡುಗನ್ನು ಪ್ರೀತಿಸಿದೆ. ಆ ಕ್ಷಣವೇ ನಾನು ಮೊದಲ ಕವನ ಬರೆದೆ, ಆದರೆ ಈವರೆಗೂ ತಾನು ಆ ಕವನವನ್ನು ಆತನಿಗೆ ನೀಡಲಿಲ್ಲ ಎಂದು ಹೇಳಿದರು. ಹತ್ತನೇ ತರಗತಿಯವರೆಗೆ ವಿದ್ಯಾಭ್ಯಾಸ ಪಡೆದ ನಾನು ಮಂಗಳಮುಖಿಯಾಗಿಯೇ ಮುಂದುವರಿಯಲು ಮನೆಬಿಟ್ಟು ದೆಹಲಿಯತ್ತ ಮುಖಮಾಡಿ ಮುಂದುವರಿದೆ, ಭಿಕ್ಷೆ ಬೇಡಲು ಹೋದೆ, ಅದನ್ನು ತನ್ನ ಗುರುಗಳ ಮಾರ್ಗದರ್ಶನದಿಂದಾಗಿ ದಕ್ಷಿಣೆಯಾಗಿ ಪರಿವರ್ತಿಸಿಕೊಂಡೆ ಎಂದು ಹೇಳಿದರು. ಮನೆಯವರ ದಬ್ಬಾಳಿಕೆಯಿಂದಾಗಿ ಆತ್ಮಹತ್ಯೆಗೂ ಮುಂದಾದೆ, ಯಾರೂ ಕೆಲಸ ನೀಡದ ಸಂದರ್ಭ ಹೊಟ್ಟೆ ಪಾಡಿಗಾಗಿ ಲೈಂಗಿಕ ಪ್ರವೃತ್ತಿಯನ್ನು ಮುಂದುವರಿಸಿದೆ ಎಂದು ಅವರು ಹೇಳಿದರು.

ನಗ್ನಳನ್ನಾಗಿಸಿದ ಕ್ಷಣ

ಬೆಂಗಳೂರಿನಲ್ಲಿ ತನ್ನಷ್ಟಕ್ಕೆ ತಾನು ನಡೆಯುತ್ತಿದ್ದೆ ನನ್ನನ್ನು ಪೊಲೀಸರು ಜೀಪಿನಲ್ಲಿ ಕೆರದುಕೊಂಡು ಹೋಗಿ ಕಾರಾಗೃಹದಲ್ಲಿ ದುಡಿಸಿಕೊಂಡಿದ್ದಲ್ಲದೆ ಬೇರೆ ಖೈದಿಗಳ ಮುಂದೆ ಅವಾಚ್ಯವಾಗಿ ನಿಂದಿಸಿ ನನ್ನನ್ನು ನಗ್ನಳನ್ನಾಗಿಸಿದ ಘಟನೆ ಮರೆಯಲಾಗದು ಎಂದ ಅವರು ಮಾನವೀಯತೆಗೆ ಎಲ್ಲಿದೆ ಬೆಲೆ ? ಎಂದು ಪ್ರಶ್ನಿಸಿದರು.

ಸಂಗಮ ಸಂಸ್ಥೆಯನ್ನು ಸೇರಿಕೊಂಡು ಸಮಾಜಮುಖಿ ಕೆಲಸಗಳಲ್ಲಿ ತನ್ನನ್ನು ತಾನುನು ತೊಡಗಿಸಿಕೊಂಡೆ, ಕವನ, ಪುಸ್ತಕಗಳನ್ನು ಬರೆಯುತ್ತಾ ಹೋದೆ ಎಂದ ಅವರು, ನಾವಿಂದು ನಮ್ಮ ಹಿರಿಯರು ನಮ್ಮ ತಲೆಯಲ್ಲಿ ತುಂಬಿಸಿದ ಕಟ್ಟ ವಿಚಾರದಲ್ಲೇ ಮುಂದುವರಿಯುತ್ತಿದ್ದೇವೆ. ಹಸಿವು, ನೋವಿಗೆ ಲಿಂಗವಿಲ್ಲದಿರುವಾಗ ಗಂಡು-ಹೆಣ್ಣೆಂಬ ಪರಿಕಲ್ಪನೆ ಯಾಕೆ ಎಂದು ಪ್ರಶ್ನಿಸಿದರು.

ಗಂಡು ಮಕ್ಕಳಿಗೂ ಕಿವಿಮಾತು ಹೇಳಿ

ಕೇವಲ ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಮಾತ್ರ ನೈತಿಕ ಬೋಧನೆ ಮಾಡುವುದಲ್ಲ, ಗಂಡು ಮಕ್ಕಳಿಗೂ ಹೆತ್ತವರು ಬೋಧನೆಯನ್ನು ಮಾಡಬೇಕು. ಆಗ ಮಾತ್ರ ಈ ಸಮಾಜದಲ್ಲಾಗುವ ಅತ್ಯಾಚಾರಗಳನ್ನು ತಡೆಯಬಹುದು ಎಂದು ಹೇಳಿದರು.

ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷೆ ಡಾ. ಮಲ್ಲಿಕಾ. ಎಸ್. ಘಂಟಿ. ನುಡಿಸಿರಿ ಉಪಾಧ್ಯಕ್ಷ ಡಾ. ನಾ. ದಾಮೋದರ ಶೆಟ್ಟಿ ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X