ಶ್ರೀನಗರ: ಮೂವರು ನಾಗರಿಕರ ಅಪಹರಣ
ಸಾಂದರ್ಭಿಕ ಚಿತ್ರ
ಶ್ರೀನಗರ, ನ. 17: ಜಮ್ಮು ಹಾಗೂ ಕಾಶ್ಮೀರದ ಶೋಪಿಯಾನ ಜಿಲ್ಲೆಯಿಂದ ಶನಿವಾರ ಮೂವರು ನಾಗರಿಕರನ್ನು ಅಪರಿಚಿತ ಬಂದೂಕುಧಾರಿಗಳು ಅಪಹರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾದಪೊರಾ ಪಯೀನ್ ಗ್ರಾಮದ ಬೇಕರಿಯೊಂದರಿಂದ ಅಪಹರಣಕ್ಕೊಳಗಾದ ನಾಗರಿಕರನ್ನು ಪಾರೂಕ್ ಅಹ್ಮದ್, ಶಾಹಿದ್ ಅಹ್ಮದ್ ಹಾಗೂ ರಾಜಾ ಎಂದು ಗುರುತಿಸಲಾಗಿದೆ. ಪುಲ್ವಾಮ ಜಿಲ್ಲ್ಲೆಯ ಸಮೀಪದ ಶೋಪಿಯಾನದಿಂದ ಶುಕ್ರವಾರ ಅಪಹರಣಕ್ಕೊಳಗಾದ ಯುವಕ ನದೀಮ್ ಮಂಝೂರ್ನನ್ನು ಹತ್ಯೆಗೈಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story