ಕ್ರಿಸ್‌ಮಸ್: ಸ್ಪಾರ್‌ನಿಂದ ಫ್ರೂಟ್ಸ್ ಮಿಕ್ಸಿಂಗ್ ಕಾರ್ಯಕ್ರಮ

ಮಂಗಳೂರು, ನ.17: ಕ್ರಿಸ್‌ಮಸ್ ಆಚರಣೆ ಪ್ರಯುಕ್ತ 3 ಟನ್ ಕ್ರಿಸ್‌ಮಸ್ ಪ್ಲಾಮ್ ಕೇಕ್‌ನ್ನು ತಯಾರಿಸಲು ಉದ್ದೇಶದಿಂದ 1,000 ಕೆ.ಜಿ. ತೂಕದ ಫ್ರೂಟ್ಸ್ ಮಿಕ್ಸಿಂಗ್ ಚಟುವಟಿಕೆ ಕಾರ್ಯಕ್ರಮವನ್ನು ನಗರದ ಸಿಟಿ ಸೆಂಟರ್ ಮಾಲ್‌ನ ಸ್ಪಾರ್ ಹೈಪರ್‌ಮಾರ್ಕೆಟ್‌ನಲ್ಲಿ ಶನಿವಾರ ಹಮ್ಮಿಕೊಳ್ಳಲಾಯಿತು.
ಫ್ರೂಟ್ಸ್ ಮಿಕ್ಸಿಂಗ್ ಕಾರ್ಯಕ್ರಮದಲ್ಲಿ ಸ್ತ್ರೀಯರು ಹಾಗೂ ಪುರುಷರು ಪ್ರತ್ಯೇಕವಾಗಿ ಪಾಲ್ಗೊಂಡಿದ್ದರು. ಪ್ರತಿ ಬ್ಯಾಚ್‌ನಲ್ಲಿ 10 ಮಂದಿ ಗ್ರಾಹಕರನ್ನೊಳಗೊಂಡ 4 ಬ್ಯಾಚ್‌ಗಳು ಫ್ರೂಟ್ಸ್‌ನ್ನು ಮಿಕ್ಸಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಕ್ಕಳಿಗೆ 1,000 ರೂ. ಶಾಪಿಂಗ್ ಮಾಡಲು ಅವಕಾಶ ಕಲ್ಪಿಸಲಾಗುವುದು. ಇಬ್ಬರು ವಿಜಯಶಾಲಿಗಳಿಗೆ ಬೆಳ್ಳಿಯ ನಾಣ್ಯಗಳನ್ನು ವಿತರಿಸಲಾಯಿತು ಎಂದು ಸ್ಪಾರ್ ಯುನಿಟಿ ಹೆಡ್ ಗುರುಪ್ರಸಾದ್ ಕಡಂಬಾರ್ ‘ವಾರ್ತಾಭಾರತಿ’ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸ್ಪಾರ್ ಯುನಿಟಿ ಹೆಡ್ ಗುರುಪ್ರಸಾದ್ ಕಡಂಬಾರ್, ನವೀನ್ ಆಮೀನ್, ಪ್ರದೀಪ್‌ಕುಮಾರ್, ಸುಕೇಶ್ ಶೆಟ್ಟಿ ಮತ್ತಿತರರು ಇದ್ದರು.