ಉಡುಪಿ: ವಕ್ಫ್ ಮಾಹಿತಿ ಕೇಂದ್ರ ಉದ್ಘಾಟನೆ

ಉಡುಪಿ, ನ.17: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ವತಿಯಿಂದ ಜಮೀಯ್ಯತುಲ್ ಫಲಾಹ್ ಉಡುಪಿ ಕಚೇರಿಯಲ್ಲಿ ಆರಂಭಿಸಲಾಗಿರುವ ವಕ್ಫ್ ಮಾಹಿತಿ ಕೇಂದ್ರವನ್ನು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ, ಅಲ್ಪ ಸಂಖ್ಯಾತರ ಕಲ್ಯಾಣ, ಹಜ್ ಹಾಗೂ ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್ ಶನಿವಾರ ಉದ್ಘಾಟಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಜಿ.ಎ.ಬಾವಾ, ಎಂ.ಎ.ಗಫೂರ್, ಜಿಲ್ಲಾ ವಕ್ಫ್ ಸಲಹಾ ಮಂಡಳಿ ಅಧ್ಯಕ್ಷ ಇಬ್ರಾಹಿಂ ಮಟಪಾಡಿ, ಜಮಿಯ್ಯ ತುಲ್ ಫಲಾಹ್ ಉಡುಪಿ ಅಧ್ಯಕ್ಷ ಅಬ್ದುಲ್ ಖತೀಬ್ ರಶೀದ್, ಕಾರ್ಯ ದರ್ಶಿ ಖಾಸಿಂ ಬಾರಕೂರು, ಕೋಶಾಧಿಕಾರಿ ಸಮೀರ್, ಜತೆ ಕಾರ್ಯದರ್ಶಿ ಮುಶೀರ್ ಶೇಕ್, ಸಂಘಟನಾ ಕಾರ್ಯದರ್ಶಿ ನಾಸೀರ್ ಯಾಕೂಬ್, ಕಾಪು ಅಧ್ಯಕ್ಷ ಶಭೀ ಕಾಝಿ, ಜಿಲ್ಲಾ ಮುಸ್ಲಿಮ್ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ವೌಲಾ, ಸಲಾವುದ್ದೀನ್ ಮೊದಲಾದವರು ಉಪಸ್ಥಿತರಿದ್ದರು.
Next Story