ಮಂಗಳೂರು: ನಾಲ್ವರು ಸಾಧಕರಿಗೆ ರಚನಾ ಪ್ರಶಸ್ತಿ ಪ್ರದಾನ

ಮಂಗಳೂರು, ನ.17: ಕೆಥೋಲಿಕ್ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ (ರಚನಾ) ವತಿಯಿಂದ ವಿವಿಧ ಕ್ಷೇತ್ರದ ನಾಲ್ವರು ಸಾಧಕರಿಗೆ ನಗರದ ಮಿಲಾಗ್ರಿಸ್ ಜ್ಯುಬಿಲಿ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಾಧಕರಾದ ಲಾರೆನ್ಸ್ ಪಿಂಟೋ (ಕೃಷಿಕ), ರೊನಾಲ್ಡ್ ಕ್ಯಾಸ್ಟಲಿನೊ (ಉದ್ಯಮಿ), ಫೇ ಡಿಸೋಜ (ವೃತ್ತಿಪರ), ಸಿಸ್ಟರ್ ಮರಿಯಾ ಜ್ಯೋತಿ ಎ.ಸಿ. (ಮಹಿಳಾ) ಅವರು ಪ್ರಶಸ್ತಿ ಸ್ವೀಕರಿಸಿದರು.
ಮಂಗಳೂರು ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ದಾನಾ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ವಲಯ ಮುಖ್ಯ ಅಂಚೆ ವ್ಯವಸ್ಥಾಪಕ ಡಾ. ಚಾರ್ಲ್ಸ್ ಲೋಬೊ ಮುಖ್ಯ ಅತಿಥಿಯಾಗಿದ್ದರು.
ರಚನಾ ಅಧ್ಯಕ್ಷ ಸ್ಟಾನಿ ಅಲ್ವಾರೀಸ್, ಉಪಾಧ್ಯಕ್ಷ ಎಲಿಯಾಸ್ ಸಾಂಕ್ತಿಸ್, ಕಾರ್ಯದರ್ಶಿ ಅನಿಲ್ ವಾಸ್, ಖಜಾಂಚಿ ಫೆಲಿಕ್ಸ್ ಜೆ.ಪಿಂಟೊ, ಸಹಕಾರ್ಯದರ್ಶಿ ನೆಲ್ಸನ್ ಮೊಂತೆರೊ, ಸಂಚಾಲಕ ಜಾನ್ ಬಿ. ಮೊಂತೆರೋ ಉಪಸ್ಥಿತರಿದ್ದರು.
Next Story