ಕಾಟಿಪಳ್ಳ : ಈದ್ ಮಿಲನ್ ಸಮ್ಮಿಲನ ಕಾರ್ಯಕ್ರಮ

ಕಾಟಿಪಳ್ಳ, ನ. 18: ಮುಹಿಯುದ್ದೀನ್ ಜುಮಾ ಮಸೀದಿ ಪಣಂಬೂರು, ಮುಸ್ಲಿಂ ಜಮಾಅತ್ ಕಮಿಟಿ ಕಾಟಿಪಳ್ಳ ಇದರ ವತಿಯಿಂದ ಈದ್ ಮಿಲನ್ ಸಮ್ಮಿಲನ ಕಾರ್ಯಕ್ರಮ ನಡೆಯಿತು.
ಮುಖ್ಯ ಅಥಿತಿಯಾಗಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಹಾಗೂ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಟಿಪಳ್ಳ ಜುಮಾ ಮಸೀದಿ ಅಧ್ಯಕ್ಷ ಮುಹಮ್ಮದ್ ತಮೀಮ್ ವಹಿಸಿದ್ದರು. ಮಸೀದಿಯ ಖತೀಬ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಸ್ಥಳೀಯ ಕಾರ್ಪೋರೇಟರ್ ಬಶೀರ್ ಅಹ್ಮದ್, ಕಾಟಿಪಳ್ಳ ಜುಮಾ ಮಸೀದಿಯ ಮಾಜಿ ಅಧ್ಯಕ್ಷ ಸಲೀಂ ರಫೀ ಹಾಗೂ ಹಾರಿಸ್ ಬೈಕಂಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
Next Story