ಕಿದಿಯೂರು ಶಾಲಾ ಲಾಂಛನ, ಮನವಿ ಪತ್ರ ಬಿಡುಗಡೆ

ಉಡುಪಿ, ನ.18: ಕಿದಿಯೂರು ವಿದ್ಯಾಸಮುದ್ರ ತೀರ್ಥ ಪ್ರೌಢಶಾಲೆಯ ಸುವರ್ಣ ಮಹೋತ್ಸವದ ಅಂಗವಾಗಿ ಸುವರ್ಣ ಮಹೋತ್ಸವ ಲಾಂಛನ ಮತ್ತು ಮನವಿ ಪತ್ರ ಬಿಡುಗಡೆ ಸಮಾರಂಭವು ರವಿವಾರ ಜರಗಿತು.
ಲಾಂಛನ ಮತ್ತು ಮನವಿ ಪತ್ರ ಬಿಡುಗಡೆಗೊಳಿಸಿದ ಉದ್ಯಮಿ ಜಿ.ಶಂಕರ್ ಮಾತನಾಡಿ, ಫೆ.8 ಮತ್ತು 9ರಂದು ನಡೆಯುವ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ತಮ್ಮ ಸಂಪೂರ್ಣ ಸಹಕರವಿದ್ದು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಈ ಶಾಲೆಯಿಂದ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆ ಯಲಿ ಎಂದು ಹಾರೈಸಿದರು.
ಅಧ್ಯಕ್ಷತೆಯನ್ನು ಕೆ.ಉದಯ ಕುಮಾರ್ ಶೆಟ್ಟಿ ವಹಿಸಿದ್ದರು. ಕಿದಿಯೂರಿನ ಪ್ರೊ.ರಾಧಾಕೃಷ್ಣ ಆಚಾರ್ಯ, ಯು.ಹರಿಯಪ್ಪಕೋಟಿಯಾನ್ ಕಿದಿಯೂರ್, ಶಾಲಾ ಮುಖ್ಯ ಶಿಕ್ಷಕಿ ಮರಿನ ಸರೋಜ ಉಪಸ್ಥಿತರಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಗುಂಡು ಬಿ.ಅಮೀನ್ ಸ್ವಾಗತಿಸಿದರು. ಗೌರವ ಸಲಹಾ ಕಾರ್ಯದರ್ಶಿ ಕೃಷ್ಣಮೂರ್ತಿ ರಾವ್ ವಂದಿಸಿದರು.
Next Story