ಉತ್ತರ ಪ್ರದೇಶದ ಅಂಗನವಾಡಿಗಳಲ್ಲಿ 14 ಲಕ್ಷ ‘ನಕಲಿ ಮಕ್ಕಳ’ ನೋಂದಾವಣೆ
ಹೊಸದಿಲ್ಲಿ,ನ.18: ಉತ್ತರ ಪ್ರದೇಶದಲ್ಲಿ 1.88 ಲ.ಅಂಗನವಾಡಿ ಕೇಂದ್ರಗಳಲ್ಲಿ 14 ಲ.ಕ್ಕೂ ಅಧಿಕ ‘ನಕಲಿ ಮಕ್ಕಳ’ ನೋಂದಣಿಯಾಗಿರುವುದು ಪತ್ತೆಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಹೇಳಿದೆ.
ಆಧಾರ್ನೊಂದಿಗೆ ಫಲಾನುಭವಿಗಳ ನೋಂದಣಿಯ ಬಳಿಕ ಈ ನಕಲಿ ಹೆಸರುಗಳನ್ನು ಗುರುತಿಸಲಾಗಿದೆ ಎಂದು ಸಚಿವಾಲಯದ ಅಧಿಕಾರಿಯೋರ್ವರು ತಿಳಿಸಿದರು.
ಸರಕಾರದ ಅಂಕಿಅಂಶಗಳಂತೆ ಉತ್ತರ ಪ್ರದೇಶದ ಅಂಗನವಾಡಿ ಕೇಂದ್ರಗಳಲ್ಲಿ ಒಟ್ಟು 1.08 ಕೋಟಿ ಮಕ್ಕಳು ಪ್ರವೇಶ ಪಡೆದಿದ್ದಾರೆ ಮತ್ತು ಪ್ರಸಕ್ತ ಹಣಕಾಸು ವರ್ಷದಲ್ಲಿ ಫೆಬ್ರವರಿ,2018ರವರೆಗೆ ಈ ಕೇಂದ್ರಗಳಿಗೆ 2,126 ಕೋ.ರೂ.ಗಳನ್ನು ಮಂಜೂರು ಮಾಡಲಾಗಿದೆ. ಪ್ರತಿ ಮಗುವಿಗೆ ಪೌಷ್ಟಿಕ ಆಹಾರಕ್ಕಾಗಿ ದಿನವೊಂದಕ್ಕೆ ಸಚಿವಾಲಯವು 4.80 ರೂ. ಮತ್ತು ರಾಜ್ಯ ಸರಕಾರ 3.20 ರೂ.ನೀಡುತ್ತಿವೆ ಎಂದು ಅಧಿಕಾರಿ ತಿಳಿಸಿದರು.
Next Story