5.50 ಲಕ್ಷ ಪೌಂಡ್ ಬೆಲೆಬಾಳುವ ಭಾರತೀಯ ಚಿತ್ರಕಲಾಕೃತಿಯ ರಫ್ತಿಗೆ ಬ್ರಿಟನ್ ನಿಷೇಧ
ಲಂಡನ್,ನ.18: ಭಾರತದ ಸಾಂಪ್ರದಾಯಿಕ ಸಂಗೀತ ಪ್ರದರ್ಶನವನ್ನು ಬಿಂಬಿಸುವ ವಿಶಿಷ್ಟ ತೈಲವರ್ಣದ ಪೇಟಿಂಗ್ ಒಂದನ್ನು ಬ್ರಿಟನ್ನಿಂದ ರಫ್ತು ಮಾಡುವುದಕ್ಕೆ ಆ ದೇಶದ ಕಲಾ ಸಚಿವರು ನಿಷೇಧ ವಿಧಿಸಿದ್ದಾರೆ. 5.50 ಲಕ್ಷ ಪೌಂಡ್ ಮೌಲ್ಯದ ಈ ಅಪೂರ್ವ ಕಲಾಕೃತಿಯನ್ನು ಬ್ರಿಟನ್ನ ಗ್ರಾಹಕರೇ ಖರೀದಿಸುವಂತೆ ಮಾಡಲು ಬ್ರಿಟಿಶ್ ಸರಕಾರ ಪ್ರಯತ್ನಿಸುತ್ತಿದೆ.
ಹಿಮಾಚಲಪ್ರದೇಶದ ಖ್ಯಾತ ಚಿತ್ರ ಕಲಾವಿದರಾಗಿದ್ದ ನೈನ್ಸುಖ್ ಗುಲೆರ್ 1710-1778ರ ಮಧ್ಯೆ ರಚಿಸಿದ್ದ ‘ಟ್ರಂಪೆಟಿಯರ್ಸ್’ (ವಾದಕರು) ಎಂಬ ಚಿತ್ರ ಕಲಾಕೃತಿಯನ್ನು ಬ್ರಿಟನ್ನ ಯಾವುದಾದರೂ ವಸ್ತುಸಂಗ್ರಾಹಲಯವು ಖರೀದಿಸುವ ಭರವಸೆಯನ್ನು ತಾನು ಹೊಂದಿರುವುದಾಗಿ ಬ್ರಿಟನ್ನ ಕಲೆ, ಪರಂಪರೆ ಹಗಾಗೂ ಪ್ರವಾಸೋದ್ಯಮ ಸಚಿವ ಮೈಕೆಲ್ ಎಲ್ಲಿಸ್ ತಿಳಿಸಿದ್ದಾರೆ.
ಈ ಅಭೂತಪೂರ್ವ ಪೇಟಿಂಗ್ನಲ್ಲಿ ಏಳು ಮಂದಿ ಗ್ರಾಮೀಣ ಸಂಗೀತಗಾರರು ಉಪ್ಪರಿಗೆಯ ಮೇಲೆ ಕುಳಿತು, ವೈವಿಧ್ಯಮಯ ಮುಖಮುದ್ರೆ ಹಾಗೂ ಭಂಗಿಗಳಲ್ಲಿ ಕುಳಿತಿರುವ ಸಂಗೀತಗಾರರು ಲವಲವಿಕೆಯಿಂದ ಉತ್ತರಭಾರತದ ಪರ್ವತ ಪ್ರದೇಶದ ವಾದ್ಯವಾದ ತುರ್ಹಿಯನನ್ನು ಬಾರಿಸುವುದನ್ನು ತೋರಿಸಲಾಗಿದೆ.
ನೈನ್ಸುಖ್ ಅವರ ಕಲಾತ್ಮಕ ಪ್ರಭಾವು ಹಲವಾರು ತಲೆಮಾರುಗಳ ಜನರ ಅನುಭವಕ್ಕೆ ಬಂದಿದೆ ಹಾಗೂ ಈ ಕಲಾಕೃತಿಯು ಅವರ ಅಸಾಧಾರಣ ಪ್ರತಿಭೆಗೆ ಸಾಕ್ಷಿಯಾಗಿದೆಯೆಂದು ಎಂದು ಎಲಿಸ್ ಹೇಳಿದ್ದಾರೆ ಕೇವಲ ಸೌಂದರ್ಯಕ್ಕೆ ಮಾತ್ರವಲ್ಲ, ಭಾರತೀಯ ಕಲೆ ಹಾಗೂ ಇತಿಹಾಸದ ಅಧ್ಯಯಯನಕ್ಕೂ ಈ ಕಲಾಕೃತಿಯನ್ನು ಬ್ರಿಟನ್ನಲ್ಲಿ ಉಳಿಸಿಕೊಳ್ಳಹಬೇಕಾಗಿದೆ ಎಂದು ನಾನು ಭಾವಿಸುತ್ತೇನೆ ಎಂದವರು ತಿಳಿಸಿದ್ದಾರೆ.