ಹುಬ್ಬುರ್ರಸೂಲ್: ಸ್ವಾಗತ ಸಮೀತಿ ಕಚೇರಿ ಉದ್ಘಾಟನೆ

ಮಂಗಳೂರು, ನ.18: ಡಿ.1ರಂದು ನಗರದ ನೆಹರೂ ಮೈದಾನದಲ್ಲಿ ಅಂತರರಾಷ್ಟ್ರೀಯ ಪ್ರಭಾಷಣಕಾರ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ‘ಹುಬ್ಬುರ್ರಸೂಲ್’ ವಿಷಯದಲ್ಲಿ ಆಶೀರ್ವಚನ ನೀಡಲಿದ್ದು, ಇದರ ಪ್ರಚಾರದ ಭಾಗವಾಗಿ ಸ್ಟೇಟ್‌ಬ್ಯಾಂಕ್‌ನ ಪೊನೀರ್ ಕಾಂಪ್ಲೆಕ್ಸ್ ನಲ್ಲಿ ಸ್ವಾಗತ ಸಮಿತಿ ಕಚೇರಿಯನ್ನು ಸ್ವಾಗತ ಸಮಿತಿ ಚೇರ್ಮನ್ ಅಬ್ದುರ್ರವೂಫ್ ಪುತ್ತಿಗೆ ಹಾಗೂ ನಿರ್ದೇಶಕ ಹಾಜಿ ಮನ್ಸೂರ್ ಆಝಾದ್ ಉದ್ಘಾಟಿಸಿದರು.
ಕುಕ್ಕಿಲ ಅಬ್ದುಲ್ ಖಾದರ್ ದಾರಿಮಿ ದುಆ ಆಶೀರ್ವಚನ ನೀಡಿದರು. ನೌಶಾದ್ ಹಾಜಿ ಸಿತಾರ್ ಮಜೀದ್ ಹಾಜಿ, ದಾವೂದ್ ಹನೀಫಿ, ರಫೀಖ್ ಮೌಲವಿ, ಸಲೀಂ ಯಮಾನಿ, ನಿಸಾರ್ ಬೆಂಗರೆ, ಸಾಹಿದ್ ಕಿನ್ಯಾ, ಫೈಸಲ್ ಮದನಿ ನಗರ, ಮುಸ್ತಫ ಫೈಝಿ ಕಿನ್ಯ ಮತ್ತಿತರರು ಉಪಸ್ಥಿತರಿದ್ದರು.
ನೌಶಾದ್ ಹಾಜಿ ಸ್ವಾಗತಿಸಿದರು. ಮಜೀದ್ ಹಾಜಿ ವಂದಿಸಿದರು.
Next Story