ಬೊಳ್ಳೂರು ಮಸೀದಿಯಲ್ಲಿ ಸ್ವಲಾತ್ ಮಜ್ಲಿಸ್ ವಾರ್ಷಿಕ

ಹಳೆಯಂಗಡಿ, ನ.19: ಬೊಳ್ಳೂರು ಮುಹಿಯುದ್ದೀನ್ ಜುಮಾ ಮಸೀದಿಯ ವತಿಯಿಂದ ನಡೆಯುವ ಸ್ವಲಾತ್ ಮಜ್ಲಿಸ್‌ನ 11ನೇ ವಾರ್ಷಿಕ ಹಾಗೂ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮ ರವಿವಾರ ರಾತ್ರಿ ಮಸೀದಿಯ ವಠಾರದಲ್ಲಿ ಜರುಗಿತು.
ಬೊಳ್ಳೂರು ಜುಮಾ ಮಸೀದಿಯ ಖತೀಬ್ ಶೈಖುನಾ ಬೊಳ್ಳೂರು ಉಸ್ತಾದ್ ಕಾರ್ಯಕ್ರಮ ಉದ್ಘಾಟಿಸಿದರು. ಮಸೀದಿ ಅಧ್ಯಕ್ಷ ಹಾಜಿ ಬಿ.ಎ.ಇದಿನಬ್ಬ ತೋಡಾರ್ ಅಧ್ಯಕ್ಷತೆ ವಹಿಸಿದ್ದರು.
ಸದರ್ ಮುಅಲ್ಲಿಂ ಅಬ್ದುಲ್ ನಾಸರ್ ಮುಸ್ಲಿಯಾರ್ ಸ್ವಾಗತಿಸಿದರು.
ಸ್ವಲಾತ್ ಮಜ್ಲಿಸ್ ಹಾಗೂ ದುಆ ನೇತೃತ್ವವನ್ನು ಶೈಖುನಾ ಅಸ್ಸೈಯದ್ ಇಬ್ರಾಹೀಂ ಬಾದಷಾ ತಂಙಳ್ ಅಲ್ ಅಝ್ಹರಿ ಅಲ್ ಬುಖಾರಿ ಆನೆಕಲ್ ವಹಿಸಿದ್ದರು. ಮುಲ್ಕಿ ಜುಮಾ ಮಸೀದಿಯ ಖತೀಬ್ ಅಲ್ಹಾಜ್ ಎಸ್.ಬಿ.ಮುಹಮ್ಮದ್ ದಾರಿಮಿ ಮುಖ್ಯ ಭಾಷಣ ಮಾಡಿದರು.
ಈ ಸಂದರ್ಭ ಮಸೀದಿಯ ಉಪಾಧ್ಯಕ್ಷ ಶೇಖ್ ಅಬ್ದುಲ್ಲಾ ಕಲ್ಲಾಪು, ಪ್ರಧಾನ ಕಾರ್ಯದರ್ಶಿ ಹಾಜಿ ಸುಲೈಮಾನ್ ಕೊಪ್ಪಲ, ಹಾಜಿ ಐ.ಎ.ಕೆ.ಅಬ್ದುಲ್ ಖಾದರ್, ನೌಫಲ್ ಫೈಝಿ, ನಾಸಿರ್ ಝುಹರಿ, ಉಮರ್ ಫಾರೂಕ್ ಮುಸ್ಲಿಯಾರ್, ಅಬ್ದುರ್ರಹ್ಮಾನ್ ಮುಸ್ಲಿಯಾರ್ ಮೊದಲಾದವರು ಉಪಸ್ಥಿತರಿದ್ದರು.