ಇಬ್ಬರು ಮಹಿಳಾ ಮಾವೋವಾದಿಗಳು ಎನ್ಕೌಂಟರ್ಗೆ ಬಲಿ
ಗಡ್ಚಿರೋಲಿ,ನ.19: ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ಸೋಮವಾರ ಮುಂಜಾನೆ ನಡೆದ ಎನ್ಕೌಂಟರ್ನಲ್ಲಿ ಇಬ್ಬರು ಮಹಿಳಾ ಮಾವೋವಾದಿಗಳನ್ನು ಹತ್ಯೆ ಮಾಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಗಡ್ಚಿರೋಲಿಯ ಧನೊರ ತಾಲೂಕದ ನಿಹಲ್ಕೆ ಅರಣ್ಯ ಪ್ರದೇಶದಲ್ಲಿ ಮುಂಜಾನೆ 8.30ರ ಸುಮಾರಿಗೆ ಮಾವೋವಾದಿಗಳು ಮತ್ತು ಗಡ್ಚಿರೋಲಿ ಪೊಲೀಸ್ ಪಡೆಯ ವಿಶೇಷ ಹೋರಾಟ ವಿಭಾಗ ಸಿ-60 ಕಮಾಂಡೊಗಳ ಮಧ್ಯೆ ಗುಂಡಿನ ಕಾಳಗ ನಡೆದು ಇಬ್ಬರು ಮಾವೋ ಮಹಿಳೆಯರು ಹತರಾಗಿದ್ದಾರೆ ಎಂದು ಗಡ್ಚಿರೋಲಿಯ ಎಎಸ್ಪಿ ಮಹೇಂದ್ರ ಪಂಡಿತ್ ತಿಳಿಸಿದ್ದಾರೆ. ಕಮಾಂಡೊ ಪಡೆ ರವಿವಾರ ರಾತ್ರಿಯಿಂದ ಈ ಪ್ರದೇಶದಲ್ಲಿ ಮಾವೋವಾದಿ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿತ್ತು. ಸೋಮವಾರ ಅರ್ಧ ಗಂಟೆಗೂ ಹೆಚ್ಚು ಕಾಲ ನಡೆದ ಗುಂಡಿನ ಚಕಮಕಿಯ ನಂತರ ಸ್ಥಳದಲ್ಲಿ ಶೋಧ ನಡೆಸಿದಾಗ ಇಬ್ಬರು ಮಹಿಳೆಯರ ಮೃತದೇಹ ಪತ್ತೆಯಾಗಿದೆ. ಸದ್ಯ ಇಡೀ ಪ್ರದೇಶದಲ್ಲಿ ಕೋಂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪಂಡಿತ್ ತಿಳಿಸಿದ್ದಾರೆ.
Next Story