ವಿಯೆಟ್ನಾಮ್ನಲ್ಲಿ ಭೂಕುಸಿತ: 13 ಸಾವು
ಹನೋಯಿ, ನ. 19: ವಿಯೆಟ್ನಾಮ್ನಲ್ಲಿ ಸುರಿದ ಬಿರುಗಾಳಿ ಸಹಿತ ಮಳೆಯಿಂದಾಗಿ ಸಂಭವಿಸಿದ ಭೂಕುಸಿತದಲ್ಲಿ 13 ಮಂದಿ ಮೃತಪಟ್ಟಿದ್ದಾರೆ ಹಾಗೂ ನಾಲ್ವರು ನಾಪತ್ತೆಯಾಗಿದ್ದಾರೆ.
ಕಾಣೆಯಾದವರ ಶೋಧ ಹಾಗೂ ಅಪಾಯಕಾರಿ ಸ್ಥಳಗಳಿಂದ ಜನರನ್ನು ತೆರವುಗೊಳಿಸುವುದಕ್ಕಾಗಿ ಸುಮಾರು 600 ಸೈನಿಕರನ್ನು ನಿಯೋಜಿಸಲಾಗಿದೆ ಎಂದು ಖಾನ್ ಹೋ ಪ್ರಾಂತದ ವಿಪತ್ತು ನಿರ್ವಹಣಾ ಕೇಂದ್ರದ ಅಧಿಕಾರಿಯೊಬ್ಬರು ಹೇಳಿದ್ದಾರೆ.
‘ತೊರಜಿ’ ಚಂಡಮಾರುತ ಸೃಷ್ಟಿಸಿದ ಭಾರೀ ಮಳೆಯಿಂದಾಗಿ ರಿಸಾರ್ಟ್ ನಗರ ನ ಟ್ರಂಗ್ನ ಕೆಲವು ಗ್ರಾಮಗಳ ಹಲವು ಮನೆಗಳು ಕುಸಿದಿವೆ ಹಾಗೂ ಮನೆಯಲ್ಲಿದ್ದವರು ಸಮಾಧಿಯಾಗಿದ್ದಾರೆ.
ವಿಯೆಟ್ನಾಮ್ನಲ್ಲಿ ಚಂಡಮಾರುತ, ಮಳೆ ಮತ್ತು ಪ್ರವಾಹ ಸಾಮಾನ್ಯವಾಗಿದೆ. ಪ್ರಾಕೃತಿಕ ವಿಕೋಪಕ್ಕೆ ಪ್ರತಿ ವರ್ಷ ನೂರಾರು ಮಂದಿ ಬಲಿಯಾಗುತ್ತಾರೆ.
Next Story