ಯುಎಇ: ಡಿ.ಕೆ.ಎಸ್.ಸಿ. ವತಿಯಿಂದ ನ.23ರಂದು ಮೀಲಾದ್ ಕಾನ್ಫರೆನ್ಸ್
ಸಚಿವ ಯು.ಟಿ.ಖಾದರ್ ಆಹ್ವಾನ ಪತ್ರಿಕೆ ಬಿಡುಗಡೆ

ದುಬೈ, ನ. 19: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯುಎಇ ರಾಷ್ಟೀಯ ಸಮಿತಿ ವತಿಯಿಂದ ನ. 23ರಂದು ದುಬೈ ದೇರಾ ಸಬಕಾ ಬಳಿ ಇರುವ ಅಲ್ ಖಲೀಜ್ ಹೋಟೆಲ್ ಆಡಿಟೋರಿಯಂ ನಲ್ಲಿ 'ಮೀಲಾದ್ ಕಾನ್ಫರೆನ್ಸ್ 2018' ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಅಹ್ವಾನ ಪತ್ರಿಕೆ ಯನ್ನು ಅಬ್ದುಲ್ ರಹಿಮಾನ್ ಸಜಿಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೀಲಾದ್ ಸ್ವಾಗತ ಸಮಿತಿ ಅಧ್ಯಕ್ಷ ಶುಕೂರ್ ಮನಿಲಾ, ಕನ್ವೀನರ್ ಇಬ್ರಾಹಿಂ ಹಾಜಿ ಕಿನ್ಯ, ರಾಷ್ಟ್ರಿಯ ಸಮಿತಿ ಪ್ರಧಾನ ಕಾರ್ಯದರ್ಶಿ ಯೂಸುಫ್ ಅರ್ಲಪದವು ಅವರ ಉಪಸ್ಥಿತಿಯಲ್ಲಿ ಬಿಡುಗಡೆ ಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ಸಚಿವ ಯು.ಟಿ.ಖಾದರ್ ಆಗಮಿಸಲಿದ್ದಾರೆ. ಡಿ.ಕೆ.ಎಸ್.ಸಿ.ಯು.ಎ.ಇ ರಾಷ್ಟೀಯ ಸಮಿತಿ ಸಲಹೆಗಾರ, ಖ್ಯಾತ ವಾಗ್ಮಿ ಉಸ್ತಾದ್ ಇಬ್ರಾಹಿಂ ಸಖಾಫಿ ಕೆದಂಬಾಡಿ ಅವರು ಮುಖ್ಯ ಪ್ರಭಾಷಣ ಮಾಡಲಿದ್ದು, ಸದಾತುಗಳು, ಉಲಮಾಗಳು, ಹಲವಾರು ಧಾರ್ಮಿಕ, ಸಾಮಾಜಿಕ ನೇತಾರರು ಭಾಗವಹಿಸುವರು.
ಸಭೆಯಲ್ಲಿ ಇ.ಕೆ.ಇಬ್ರಾಹಿಂ, ಹಾಜಿ ಅಬ್ದುಲ್ ರಝಾಕ್ ಜಲ್ಲಿ, ಇಬ್ರಾಹಿಂ ಕಳತ್ತೂರು, ಅಶ್ರಫ್ ಸತ್ತಿಕಲ್, ಕಮಾಲುದ್ದೀನ್ ಅಂಬಲಮೊಗರು , ಅಬ್ಬಾಸ್ ಪಾಣಾಜೆ, ಹಾಜಿ.ಅಬ್ದುಲ್ ರಹಿಮಾನ್ ಸಂಟ್ಯಾರ್, ಹುಸೈನ್ ಇನೋಳಿ, ಹಾಜಿ ಮುಹಮ್ಮದ್ ಮುರ, ಅಬ್ದುಲ್ ಹಮೀದ್ ಸುಳ್ಯ, ಅಶ್ರಫ್ ಖಾನ, ಕಮರುದ್ದೀನ್ ಗುರುಪುರ, ಹಾಜಿ ಅಶ್ರಫ್ ಉಳ್ಳಾಲ, ಹಾಸನ್ ಬಾವ ಹಳೆಯಂಗಡಿ , ಉಮ್ಮರ್ ಪಾಣಾಜೆ, ಹಾಜಿ. ಅಬ್ದುಲ್ಲಾ ಬೀಜಾಡಿ, ಇಕ್ಬಾಲ್ ಕುಂದಾಪುರ ಹಾಗೂ ಇನ್ನಿತರ ನೇತಾರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮೌಲೂದ್ ಪಾರಾಯಣ, ಬುರ್ದಾ ಮಜ್ಲಿಸ್, ನಾತ್ ಷರೀಫ್ , ದಫ್ ಕಾರ್ಯಕ್ರಮ ನಡೆಯಲಿದೆ ಎಂದು ಮೀಲಾದ್ ಸ್ವಾಗತ ಸಮಿತಿ ಅಧ್ಯಕ್ಷ ಶುಕೂರ್ ಮನಿಲಾ , ಕನ್ವೀನರ್ ಇಬ್ರಾಹಿಂ ಹಾಜಿ ಕಿನ್ಯ ರಾಷ್ಟ್ರಿಯ ಸಮಿತಿ ಅಧ್ಯಕ್ಷ ಹಾಜಿ.ಇಕ್ಬಾಲ್ ಕಣ್ಣಂಗಾರ್ ಪ್ರಧಾನ ಕಾರ್ಯದರ್ಶಿ ಯೂಸುಫ್ ಅರ್ಲಪದವು ತಿಳಿಸಿದ್ದಾರೆ.