ಉಡುಪಿ: ಬಿಪಿಎಲ್ ಪಡಿತರ ಚೀಟಿ ಅರ್ಜಿಗಳ ವಿಲೇವಾರಿ
ಉಡುಪಿ, ನ.19: ಉಡುಪಿ, ಕಾಪು ಮತ್ತು ಬ್ರಹ್ಮಾವರ ತಾಲೂಕಿನಲ್ಲಿ 2017ರ ಜನವರಿಯಿಂದ 2018ರ ಏಪ್ರಿಲ್ವರೆಗೆ ಹೊಸ ಬಿಪಿಎಲ್ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರು ಅರ್ಜಿ ಸ್ವೀಕೃತಿ, ಕುಟುಂಬ ಸದಸ್ಯರೊಬ್ಬರ ಜಾತಿ ಮತ್ತು ಆದಾಯ ಧೃಡಪತ್ರ ಹಾಗೂ ಆಧಾರ್ ಕಾರ್ಡ್, ಮನೆ ತೆರಿಗೆ ರಸೀತಿ, ಬಾಡಿಗೆ ಮನೆಯಾಗಿದ್ದಲ್ಲಿ ಬಾಡಿಗೆ ಕರಾರು ಪತ್ರದ ಪ್ರತಿಗಳನ್ನು ಉಡುಪಿ, ಕಾಪು ನಗರ ಪ್ರದೇಶ ಮತ್ತು ಉಡುಪಿ, ಬ್ರಹ್ಮಾವರ ಗ್ರಾಮಾಂತರ ಪ್ರದೇಶದ ವರು ತಮ್ಮ ವ್ಯಾಪ್ತಿಯ ಗ್ರಾಮ ಕರಣಿಕರ ಕಚೇರಿಗೆ ಸಲ್ಲಿಸುವಂತೆ ಉಡುಪಿ ತಾಲೂಕು ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story