ಮೈಸೂರು: ಮಗಳ ಮದುವೆಗೆ ಇಟ್ಟಿದ್ದ 25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಲೂಟಿ
ಮೈಸೂರು,ನ.19: ನಕಲಿ ಕೀ ಬಳಸಿ 25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 2.50 ಲಕ್ಷ ರೂ. ನಗದನ್ನು ಕಳ್ಳನೊಬ್ಬ ಕದ್ದು ಪರಾರಿಯಾದ ಘಟನೆ ನಡೆದಿದೆ.
ರಾಜೀವ್ ನಗರ ನಿವಾಸಿ ಕಾವೇರಿ ಎಂಪೇರಿಯಂ ಮಾಲಕ ಇಲ್ಯಾಸ್ ಬೇಗ್ ಎಂಬವರು ಚಿನ್ನಾಭರಣ ಕಳೆದುಕೊಂಡವರು. ಮೈಸೂರಿನ ಉದ್ಯಮಿಯಾಗಿರುವ ಇಲ್ಯಾಸ್ ಬೇಗ್ ತನ್ನ ಮಗಳ ಮದುವೆಗೆಂದು ಚಿನ್ನಾಭರಣ ಹಾಗೂ ನಗದನ್ನು ಖರೀದಿಸಿ ಕೊಠಡಿಯಲ್ಲಿಟ್ಟಿದ್ದರು. ಮದುವೆಯ ಸಂಭ್ರಮದಲ್ಲಿದ್ದ ಕುಟುಂಬಸ್ಥರು ಹೊರಗೆ ಹೋಗಿದ್ದಾಗ ಮುಖಕ್ಕೆ ಮಾಸ್ಕ್, ಶಲ್ಯ ಧರಿಸಿ ಮನೆಗೆ ನುಗ್ಗಿದ ವ್ಯಕ್ತಿಯೊಬ್ಬ ಚಿನ್ನಾಭರಣ, ನಗದು ಕಳವುಗೈದಿದ್ದಾನೆ. ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





