ಬಯಲು ಶೌಚ ಮುಕ್ತ ರಾಜ್ಯ ಮಾಡಲು ಎಲ್ಲರೂ ಸಹಕರಿಸಿ: ಮೈಸೂರು ಜಿ.ಪಂ. ಸಿಇಓ ಕೆ. ಜ್ಯೋತಿ
ವಿಶ್ವ ಶೌಚಾಲಯ ದಿನಾಚರಣೆ-2018

ಮೈಸೂರು,ನ.19: ಸ್ವಚ್ಛತೆ ಕಾಪಾಡಲು ಬಯಲು ಶೌಚ ಮುಕ್ತ ರಾಜ್ಯ ಮಾಡಲು ನಮಗೆ ಎಲ್ಲರೂ ಸಹಕಾರ ನೀಡಿ ಎಂದು ಜಿಲ್ಲಾ ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ. ಜ್ಯೋತಿ ಮನವಿ ಮಾಡಿದರು.
ನಗರದ ಕಲಾಮಂದಿರದಲ್ಲಿ ಸೋಮವಾರ ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸಲಾದ ವಿಶ್ವ ಶೌಚಾಲಯ ದಿನಾಚರಣೆ-2018 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಒಂದೊಂದು ಜಿಲ್ಲೆಗಳು ಕಾಲ ಕ್ರಮೇಣ ಬಯಲು ಶೌಚ ಮುಕ್ತ ಜಿಲ್ಲೆಗಳಾಗುತ್ತಿದೆ. ಮುಂದೊಂದು ದಿನ ನಮ್ಮ ರಾಜ್ಯ ಬಯಲು ಶೌಚ ಮುಕ್ತ ರಾಜ್ಯವಾಗುತ್ತದೆ. ಇದರಲ್ಲಿ ಯಾವುದೇ ಸಂಶಯಬೇಡ ಎಂದರು.
ನಮಗೆ ತಿಳಿಯದೇ ಇನ್ನೂ ಶೌಚಾಲಯ ಕಟ್ಟದೆ ಇರುವವರಿಗೂ ಅರಿವು ಮೂಡಿಸಲಾಗುವುದು. ಇಂದಿನಿಂದಲೇ ಬೀದಿನಾಟಕ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ರೂಪಿಸಿ ಅರಿವು ಮೂಡಿಸಲಾಗುವುದು. ಇದಕ್ಕೆ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳ ಸಹಕಾರ ಅವಶ್ಯ. ಸ್ವಚ್ಛತೆ ಕಾಪಾಡಲು ಬಯಲು ಶೌಚ ಮುಕ್ತ ರಾಜ್ಯ ಮಾಡಲು ನಮಗೆ ಎಲ್ಲರೂ ಸಹಾಕಾರ ನೀಡಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿ.ಪಂ ಅಧ್ಯಕ್ಷ ನಯೀಮಾ ಸುಲ್ತಾನ್ ನಜೀರ್ ಅಹ್ಮದ್, ಸ್ವಸಹಾಯ ಸಂಘದ ಸದಸ್ಯರು ಹಾಗೂ ಗ್ರಾಮ ಪಂ. ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.







