ಆಸ್ಟ್ರೇಲಿಯದಲ್ಲಿ ಧೋನಿ ಸಾಧನೆಯನ್ನು ಕೊಹ್ಲಿ ಮುಂದುವರಿಸುವರೇ?
ಹೊಸದಿಲ್ಲಿ,ನ.19: ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ 2016ರಲ್ಲಿ ಆಸ್ಟ್ರೇಲಿಯಕ್ಕೆ ತೆರಳಿದ್ದ ಟೀಮ್ ಇಂಡಿಯಾ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯನ್ನು 3-0 ಅಂತರದಲ್ಲಿ ಗೆದ್ದುಕೊಂಡು ತವರಿಗೆ ಮರಳಿತ್ತು.
ಎರಡು ವರ್ಷಗಳ ಬಳಿಕ ಮತ್ತೊಮ್ಮೆ ಆಸ್ಟ್ರೇಲಿಯಕ್ಕೆ ಟೀಮ್ ಇಂಡಿಯಾ ಪಯಣಿಸಿದೆ. ಆದರೆ ಈ ಬಾರಿ ಧೋನಿ ತಂಡದಲ್ಲಿಲ್ಲ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯ ನೆಲದಲ್ಲಿ ಮೊದಲ ಬಾರಿ ಆಸ್ಟ್ರೇಲಿಯವನ್ನು ಎದುರಿಸಲಿದೆ.
2016ರಲ್ಲಿ ಕೊಹ್ಲಿ ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ 55 ಎಸೆತಗಳಲ್ಲಿ 90 ರನ್ ಗಳಿಸಿ ಆ್ಯರೊನ್ ಫಿಂಚ್ ನಾಯಕತ್ವದ ಆಸ್ಟ್ರೇಲಿಯ ವಿರುದ್ಧ 37 ರನ್‌ಗಳ ಗೆಲುವಿಗೆ ನೆರವಾಗಿದ್ದರು.
30ರ ಹರೆಯದ ಕೊಹ್ಲಿ ಎರಡನೇ ಪಂದ್ಯದಲ್ಲಿ ಔಟಾಗದೆ 59 ರನ್ ಸಿಡಿಸಿದ್ದರು. ಭಾರತ ಈ ಪಂದ್ಯದಲ್ಲಿ 7 ವಿಕೆಟ್‌ಗಳ ಜಯ ಗಳಿಸಿತ್ತು. ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ಮೂರನೇ ಪಂದ್ಯದಲ್ಲೂ ಕೊಹ್ಲಿ ಅರ್ಧಶತಕ ಸಿಡಿಸಿ ಭಾರತಕ್ಕೆ ಆಸ್ಟ್ರೇಲಿಯದ ನೆಲದಲ್ಲಿ ಕ್ಲೀನ್ ಸ್ವೀಪ್ ಸಾಧಿಸಲು ನೆರವಾಗಿದ್ದರು. ಕೊಹ್ಲಿ ಆಸ್ಟ್ರೇಲಿಯದ ವಿರುದ್ಧ ಗರಿಷ್ಠ ರನ್ ದಾಖಲಿಸಿದವರು. ಅವರು 60.42 ಸರಾಸರಿಯಂತೆ 423 ರನ್ ದಾಖಲಿಸಿದ್ದರು. ಆಸ್ಟ್ರೇಲಿಯ ವಿರುದ್ಧ 2008ರಲ್ಲಿ ಎಂ.ಎಸ್. ಧೋನಿ ನಾಯಕತ್ವದ ಟೀಮ್ ಇಂಡಿಯಾ ಏಕೈಕ ಟ್ವೆಂಟಿ-20 ಪಂದ್ಯದಲ್ಲಿ 9 ವಿಕೆಟ್‌ಗಳ ಸೋಲು ಅನುಭವಿಸಿತ್ತು. 2012ರಲ್ಲಿ ನಡೆದ ಸರಣಿಯಲ್ಲಿ ಧೋನಿ ನಾಯಕತ್ವದ ಟೀಮ್ ಇಂಡಿಯಾ 2 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿತ್ತು. ಒಟ್ಟಾರೆ ಆಸ್ಟ್ರೇಲಿಯ ವಿರುದ್ಧ ಟೀಮ್ ಇಂಡಿಯಾ 16 ಟ್ವೆಂಟಿ-20 ಪಂದ್ಯಗಳನ್ನು ಆಡಿದೆ. 10ರಲ್ಲಿ ಗೆಲುವು ದಾಖಲಿಸಿದೆ. 5ರಲ್ಲಿ ಸೋಲು ಮತ್ತು 1 ಪಂದ್ಯ ರದ್ದಾಗಿದೆ. ಎರಡೂ ತಂಡಗಳ ಪ್ರಮುಖ ಆಟಗಾರರು ದಾಖಲಿಸಿದ ಸಾಧನೆಯ ವಿವರವನ್ನು ಇಲ್ಲಿ ನೀಡಲಾಗಿದೆ.
►ವಿರಾಟ್ ಕೊಹ್ಲಿ: ನಾಯಕ ವಿರಾಟ್ ಕೊಹ್ಲಿಗೆ ಆಸ್ಟ್ರೇಲಿಯ ವಿರುದ್ಧ ಆಡುವುದೆಂದರೆ ಹೆಚ್ಚು ಖುಷಿಯ ವಿಚಾರ. ಅವರು ರನ್ ಗಳಿಕೆಯಲ್ಲಿ ಎಲ್ಲರನ್ನ್ನೂ ಮೀರಿಸಿದ್ದಾರೆ. ಆಸ್ಟ್ರೇಲಿಯ ವಿರುದ್ಧ ಅವರು 11 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದಾರೆ. 60.42 ಸರಾಸರಿಯಂತೆ ಒಟ್ಟು 423 ರನ್ ಗಳಿಸಿದ್ದಾರೆ. 4 ಅರ್ಧಶತಕಗಳನ್ನು ದಾಖಲಿಸಿದ್ದಾರೆ.
►ಆ್ಯರೊನ್ ಫಿಂಚ್: ಭಾರತದ ವಿರುದ್ಧ ಆ್ಯರೊನ್ ಫಿಂಚ್ 8 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದಾರೆ. 2 ಅರ್ಧಶತಕಗಳನ್ನು ಒಳಗೊಂಡ 302 ರನ್ ದಾಖಲಿಸಿದ್ದಾರೆ.
►ಶೇನ್ ವಾಟ್ಸನ್: ಆಸ್ಟ್ರೇಲಿಯ ಆಲ್‌ರೌಂಡರ್ ಶೇನ್ ವಾಟ್ಸನ್ ರನ್ ಗಳಿಕೆಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. 8 ಟ್ವೆಂಟಿ-20 ಪಂದ್ಯಗಳಲ್ಲಿ 50.60 ಸರಾಸರಿಯಲ್ಲಿ 342 ರನ್ ಗಳಿಸಿದ್ದಾರೆ. 2 ಅರ್ಧಶತಕ ಅವರ ಹೆಸರಲ್ಲಿ ದಾಖಲಾಗಿದೆ.
► ಯುವರಾಜ್ ಸಿಂಗ್: ಭಾರತದ ಖ್ಯಾತ ಆಲ್‌ರೌಂಡರ್ ಯುವರಾಜ್ ಸಿಂಗ್ 10 ಪಂದ್ಯಗಳಲ್ಲಿ 56.60 ಸರಾಸರಿಯಂತೆ 283 ರನ್ ಗಳಿಸಿದ್ದಾರೆ. 3 ಅರ್ಧಶತಕಗಳನ್ನು ದಾಖಲಿಸಿರುವ ಯುವರಾಜ್ ಸಿಂಗ್ 19 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.
►ರೋಹಿತ್ ಶರ್ಮಾ: 15 ಟ್ವೆಂಟಿ-20 ಪಂದ್ಯಗಳಲ್ಲಿ ರೋಹಿತ್ ಶರ್ಮಾ ದಾಖಲಿಸಿದ ರನ್ 25.72 ಸರಾಸರಿಯಂತೆ 283. ಅರ್ಧಶತಕ 3.
► ಉಭಯ ತಂಡಗಳ ಬೌಲರ್‌ಗಳ ಪೈಕಿ ಭಾರತದ ಜಸ್‌ಪ್ರೀತ್ ಬುಮ್ರಾ ಎಲ್ಲರನ್ನ್ನೂ ಮೀರಿಸಿದ್ದಾರೆ. ಬುಮ್ರಾ 6 ಪಂದ್ಯಗಳಲ್ಲಿ 10 ವಿಕೆಟ್ ಪಡೆದಿದ್ದಾರೆ. ಎಕಾನಮಿ ರೇಟ್ 8.23
► ಶೇನ್ ವಾಟ್ಸನ್: ಆಲ್‌ರೌಂಡರ್ ಶೇನ್ ವಾಟ್ಸನ್ 8 ಟ್ವೆಂಟಿ-20 ಪಂದ್ಯಗಳಲ್ಲಿ 10 ವಿಕೆಟ್ ಪಡೆದಿದ್ದಾರೆ. ಎಕಾನಮಿ ರೇಟ್ 7.55.
►ರವಿಚಂದ್ರನ್ ಅಶ್ವಿನ್ ಆಸ್ಟ್ರೇಲಿಯ ವಿರುದ್ಧ ಆಡಿರುವ 9 ಟ್ವೆಂಟಿ-20 ಪಂದ್ಯಗಳಲ್ಲಿ 10 ವಿಕೆಟ್ ಪಡೆದಿದ್ದಾರೆ. ಎಕಾನಮಿ ರೇಟ್ 8.43. ಒಂದು ಬಾರಿ 4 ವಿಕೆಟ್ ಪಡೆದ ಸಾಧನೆ ಮಾಡಿದ್ದರು.
►ರವೀಂದ್ರ ಜಡೇಜ : ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಅವರು 9 ಟ್ವೆಂಟಿ -20ಪಂದ್ಯಗಳಲ್ಲಿ 8 ವಿಕೆಟ್ ಪಡೆದಿದ್ದಾರೆ. ಎಕಾನಮಿ ರೇಟ್ 7.96.
<► ಭುವನೇಶ್ವರ ಕುಮಾರ್: ವೇಗಿ ಭುವನೇಶ್ವರ ಕುಮಾರ್ 2012ರಲ್ಲಿ ಪಾಕಿಸ್ತಾನ ವಿರುದ್ಧ ಟ್ವೆಂಟಿ-20 ಕ್ರಿಕೆಟ್‌ಗೆ ಪ್ರವೇಶ ಪಡೆದಿದ್ದರು. ಅವರು ಆಸ್ಟ್ರೇಲಿಯ ವಿರುದ್ಧ ಆಡಿರುವ 4 ಪಂದ್ಯಗಳಲ್ಲಿ 5.78 ಸರಾಸರಿಯಂತೆ 6 ವಿಕೆಟ್‌ಗಳನ್ನು ಪಡೆದಿದ್ದಾರೆ. ಎಕಾನಮಿ ರೇಟ್ 5.78







