ಇನ್ನೂ ಬಂಗಾಳ ರಣಜಿ ತಂಡ ಸೇರದ ಶಮಿ
ಕೋಲ್ಕತಾ, ನ.19: ಆಸ್ಟ್ರೇಲಿಯ ಪ್ರವಾಸ ಕೈಗೊಳ್ಳಲಿರುವ ಭಾರತದ ವೇಗದ ಬೌಲರ್ ಮುಹಮ್ಮದ್ ಶಮಿ ಇನ್ನಷ್ಟೇ ಬಂಗಾಳ ರಣಜಿ ತಂಡವನ್ನು ಸೇರ್ಪಡೆಯಾಗಬೇಕಾಗಿದೆ.
ಶಮಿಗೆ ಮಂಗಳವಾರ ಆರಂಭವಾಗಲಿರುವ ಕೇರಳ ವಿರುದ್ಧ ರಣಜಿ ಪಂದ್ಯ ಆಡಲು ಬಿಸಿಸಿಐ ಅನುಮತಿ ನೀಡಿದೆ. ಆದರೆ, ಶಮಿ ಅವರು ಪ್ರತಿ ಇನಿಂಗ್ಸ್‌ನಲ್ಲಿ 15 ರಿಂದ 17 ಓವರ್‌ಗಳ ಬೌಲಿಂಗ್ ಮಾಡಬೇಕೆಂದು ಬಿಸಿಸಿಐ ಷರತ್ತು ವಿಧಿಸಿದೆ. ಉತ್ತರ ಪ್ರದೇಶ ಮೂಲದ ಶಮಿ ರವಿವಾರ ತಂಡವನ್ನು ಸೇರಬೇಕಾಗಿತ್ತು. ಆದರೆ, ಅವರ ನಡೆ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.
‘‘ಶಮಿ ತನ್ನ ತವರೂರಿಗೆ ತೆರಳಿದ್ದು ಶೀಘ್ರವೇ ತಂಡ ಸೇರಿಕೊಳ್ಳಲಿದ್ದಾರೆ’’ ಎಂದು ಬಂಗಾಳದ ನಾಯಕ ಮನೋಜ್ ತಿವಾರಿ ಹೇಳಿದ್ದಾರೆ.
Next Story





