ರಾಹುಲ್ ಗಾಂಧಿ ರಫೇಲ್ ಚರ್ಚೆ ಸವಾಲಿಗೆ ಇರಾನಿ ಉತ್ತರ!

ಹೊಸದಿಲ್ಲಿ, ನ.20: ರಫೇಲ್ ಯುದ್ದ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿ ತನ್ನೊಂದಿಗೆ 15 ನಿಮಿಷ ಚರ್ಚೆ ನಡೆಸುವಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಎಸೆದಿರುವ ಸವಾಲಿಗೆ ಕೇಂದ್ರ ಸಚಿವೆ ಸ್ಮತಿ ಇರಾನಿ ಪ್ರತಿಕ್ರಿಯಿಸಲು ಮುಂದಾಗಿದ್ದಾರೆ.
‘‘ಒಂದು ವೇಳೆ ಅವರು ಸವಾಲೆಸೆಯಲು ಬಯಸಿದ್ದರೆ, ಪ್ರಧಾನಮಂತ್ರಿ ಕಚೇರಿಗೆ ಬಂದು ಪೇಪರ್ನ ಸಹಾಯವಿಲ್ಲದೆ ದೇಶದ ಕುರಿತ ವಿಚಾರ ಮಾತನಾಡಲಿ. ಅಮೇಠಿಯ ಗ್ರಾಮ ಪಂಚಾಯತ್ಗಳ ಹೆಸರುಗಳನ್ನು ಹೇಳಿದರೆ ಅದೊಂದು ದೊಡ್ಡ ವಿಷಯವಾಗುತ್ತದೆ’’ ಎಂದು ಇರಾನಿ ವ್ಯಂಗ್ಯವಾಡಿದ್ದಾರೆ.
ಅಮೇಠಿ ಗಾಂಧಿ ಕುಟುಂಬದ ಪ್ರಾಬಲ್ಯವಿರುವ ಕ್ಷೇತ್ರ. ಈ ಕ್ಷೇತ್ರದ ಮೇಲೆ ಕಣ್ಣಿಟಿರುವ ಇರಾನಿ 2014ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಆದರೆ, ರಾಹುಲ್ ಗಾಂಧಿ ಅವರ ಗೆಲುವಿನ ಅಂತರ ಕುಗ್ಗಿಸಲು ಸಮರ್ಥರಾಗಿದ್ದರು.
Next Story