ಕೃಷ್ಣಾಪುರದಲ್ಲಿ ಮೀಲಾದುನ್ನಬಿ

ಮಂಗಳೂರು, ನ.20: ಕೃಷ್ಣಾಪುರದ ಬದ್ರಿಯಾ ಜುಮಾ ಮಸ್ಜಿದ್ ಮುಸ್ಲಿಂ ಜಮಾಅತ್ ವತಿಯಿಂದ ಮಂಗಳವಾರ ಮೀಲಾದುನ್ನಬಿ ಆಚರಿಸಲಾಯಿತು. ಜಮಾಅತ್ ವ್ಯಾಪ್ತಿಯ 6 ಮದ್ರಸಗಳ ಸುಮಾರು 1,500 ವಿದ್ಯಾರ್ಥಿಗಳು ಮೀಲಾದ್ ರ್ಯಾಲಿಯಲ್ಲಿ ಪಾಲ್ಗೊಂಡರು.
ಕೃಷ್ಣಾಪುರ ಖಾಝಿ ಅಲ್‌ಹಾಜ್ ಇ.ಕೆ. ಇಬ್ರಾಹೀಂ ಮುಸ್ಲಿಯಾರ್ ದುಆಗೈದರು. ಮಸೀದಿಯ ಅಧ್ಯಕ್ಷ ಅಲ್‌ಹಾಜ್ ಬಿ.ಎಂ. ಮುಮ್ತಾಝ್ ಅಲಿ ಧ್ವಜಾರೋಹಣಗೈದರು. ಫಾರೂಕ್ ಸಖಾಫಿ ಪ್ರವಾದಿ ಸಂದೇಶ ನೀಡಿದರು.
ಜಮಾಅತ್‌ನ ಆಡಳಿತ ಕಮಿಟಿಯ ಸದಸ್ಯರು, ಮುಅಲ್ಲಿಮರು, ಜಮಾಅತರು ಪಾಲ್ಗೊಂಡಿದ್ದರು.
Next Story