ವಿಟ್ಲ: ಮೀಲಾದುನ್ನಬಿ ಆಚರಣೆ
ವಿಟ್ಲ, ನ.20: ವಿಶ್ವ ಪ್ರವಾದಿ ಮಹಮ್ಮದ್ ಮುಸ್ತಫಾ (ಸ.)ರವರ ಜನ್ಮ ದಿನವನ್ನು ವಿಟ್ಲ ಕೇಂದ್ರ ಜುಮಾ ಮಸೀದಿಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಮಸೀದಿಯ ಕೋಶಾಧಿಕಾರಿ ಅಂದುಞಿ ಗಮಿ ಮೀಲಾದುನ್ನಬಿ ಅಂಗವಾಗಿ ಧ್ವಜಾರೋಹಣ ನೆರವೇರಿಸಿದರು. ಅಧ್ಯಕ್ಷ ವಿ.ಎಚ್.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಖತೀಬ್ ಅಬ್ದುಸ್ಸಲಾಂ ಲತೀಫಿ ದುಆ ನೆರವೇರಿಸಿದರು.
ಸದರ್ ಉಮರ್ ಸಅದಿ, ನೋಟರಿ ಅಬೂಬಕರ್, ಇಸ್ಮಾಯೀಲ್ ಪರ್ತಿಪ್ಪಾಡಿ, ಮುಹಮ್ಮದ್ ಗಮಿ, ಗಫೂರ್ ಮೇಗಿನಪೇಟೆ, ಇಕ್ಬಾಲ್ ಮೇಗಿನಪೇಟೆ, ಮಹಮ್ಮದ್ ಇಕ್ಬಾಲ್ ಹಾನೆಸ್ಟ್, ವಿ.ಕೆ.ಎಂ.ಅಶ್ರಫ್, ವಿ.ಎ.ರಶೀದ್, ಅಶ್ರಫ್ ಮುಹಮ್ಮದ್ ಪೊನ್ನೋಟು, ಅಬೂಬಕರ್ ಅನಿಲಕಟ್ಟೆ, ಯೂಸುಫ್ ಗಮಿ, ರಫೀಕ್ ಪೊನ್ನೋಟು, ವಿ.ಕೆ.ಎಂ.ಹಂಝ ಮುಂತಾದವರು ಉಪಸ್ಥಿತರಿದ್ದರು.
Next Story