ಅಮೆಮಾರ್ ನಲ್ಲಿ ಮೀಲಾದ್ ಜಾಥಾ

ಫರಂಗಿಪೇಟೆ, ನ.20: ಅಮೆಮಾರ್ ಬದ್ರಿಯಾ ಜುಮಾ ಮಸೀದಿ ಹಾಗೂ ಬದ್ರಿಯಾ ಮದ್ರಸದ ವತಿಯಿಂದ ಮೀಲಾದ್ ಜಾಥಾ ನಡೆಯಿತು.
ಮಸೀದಿಯ ಅಧ್ಯಕ್ಷ ಹಾಜಿ ಉಮರಬ್ಬ ಧ್ವಜಾರೋಹಣಗೈದರು. ಸ್ಥಳೀಯ ಖತೀಬ್ ಅಬೂ ಸ್ವಾಲಿಹ್ ಫೈಝಿ ದುಆಗೈದರು. ಹಾಜಿ ಉಮರಬ್ಬ ಎಸ್ಕೆ.ಎಸ್.ಬಿ.ವಿ. ಅಮೆಮಾರ್ ಘಟಕಾಧ್ಯಕ್ಷ ಸೈಫುದ್ದೀನ್ ಧ್ವಜ ಹಸ್ತಾಂತರಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮಸೀದಿಯ ಪ್ರಧಾನ ಕಾರ್ಯದರ್ಶಿ ಅಬೂ ಸ್ವಾಲಿಹ್ ಉಸ್ತಾದ್, ಕೋಶಾಧಿಕಾರಿ ಮುಸ್ತಫ, ಮಸೀದಿಯ ಸದಸ್ಯರಾದ, ಹಾಜಿ ಅಬ್ದುಲ್ ಖಾದರ್, ಅಬ್ದುಲ್ ಹಮೀದ್, ಇಬ್ರಾಹೀಂ, ಜಮಾಲುದ್ದಿನ್, ಮುಹಮ್ಮದ್ ಶಾಫಿ, ಅಬ್ದುರ್ರಝಾಕ್, ಸುಲೈಮಾನ್ ಉಸ್ತಾದ್, ಎಸ್ಕೆಎಸ್ಸೆಸ್ಸೆಫ್ ಅಮೆಮಾರ್ ಶಾಖಾಧ್ಶಕ್ಷ ಮಕ್ಬೂಲ್, ಅಮೆಮಾರ್ ಮದ್ರಸ ಅಧ್ಶಾಪಕರಾದ ಇಸ್ಮಾಯೀಲ್ ಯಮಾನಿ ತಿಂಗಳಾಡಿ, ಅಬೂಬಕರ್ ಮದನಿ, ಉಸ್ಮಾನ್ ಹನೀಫಿ, ಸಿರಾಜುದ್ದೀನ್ ಮದನಿ, ಎಸ್ಕೆ.ಎಸ್.ಬಿ.ವಿ. ಜನರಲ್ ಕನ್ವೀನರ್ ಆದಂ ಸೈಫುಲ್ಲಾ ಮುಂತಾದವರು ಭಾಗವಹಿಸಿದ್ದರು.
ಸದರ್ ಮುಅಲ್ಲಿಂ ಮುಹಿಯುದ್ದೀನ್ ಅಲ್ ಹಸನಿ ಸ್ವಾಗತಿಸಿದರು,
Next Story