ಸಾಮುದಾಯಿಕ ಸಮ್ಮಿಲನ; ಆದರ್ಶ ವಿವಾಹದ ಪೂರ್ವ ಸಿದ್ಧತಾ ಸಮಾವೇಶ

ಮಂಗಳೂರು, ನ.20: ಡಿಸೆಂಬರ್ 3ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯಲಿರುವ ‘ಕನೆಕ್ಟ್-2018’ ಸಾಮುದಾಯಿಕ ಸಮ್ಮಿಲನದಲ್ಲಿ ನಡೆಯುವ ಹನ್ನೊಂದು ಜೋಡಿಯ ಆದರ್ಶ ವಿವಾಹ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತಾ ಸಮಾವೇಶವು ಪಡೀಲ್ ನಲ್ಲಿರುವ ಎಸ್‌ಇಡಿಸಿ ಸಭಾಂಗಣದಲ್ಲಿ ಚೇರ್‌ಮ್ಯಾನ್ ಹಾಜಿ ಶೇಖ್ ಬಾವ ಯುಎಇ ಅಧ್ಯಕ್ಷತೆಯಲ್ಲಿ ನಡೆಯಿತು.
ಸುನ್ನೀ ಕೋ ಆರ್ಡಿನೇಶನ್ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ ಸಭೆಯನ್ನು ಉದ್ಘಾಟಿಸಿದರು ಕೆಸಿಎಫ್ ಅಂತಾರಾಷ್ಟ್ರೀಯ ಅಧ್ಯಕ್ಷ ಎಸ್.ಪಿ.ಹಂಝ ಸಖಾಫಿ ಬಂಟ್ವಾಳ ಮುಖ್ಯ ಮಾಹಿತಿ ನೀಡಿದರು. ಎಸ್‌ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂಎಸ್‌ಎಂ ಝೈನಿ ಕಾಮಿಲ್ ವಧುವರರಿಗೆ ವಸ್ತ್ರ ಹಾಗೂ ಕಿಟ್ ವಿತರಿಸಿ ಮಾತನಾಡಿದರು.
ಎಸ್ಸೆಸ್ಸೆಫ್ ಇಹ್ಸಾನ್ ಸಮಿತಿಯ ಅಧ್ಯಕ್ಷ ಎನ್‌ಕೆಎಂ ಶಾಫಿ ಸಅದಿ ಬೆಂಗಳೂರು, ಎಸ್ಸೆಸ್ಸೆಫ್ ರಾಷ್ಟ್ರೀಯ ಪ್ರ ಕಾರ್ಯದರ್ಶಿ ಕೆ.ಎಂ.ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ಮಾತನಾಡಿದರು.
ಎಸ್‌ಇಡಿಸಿ ರಾಜ್ಯಾಧ್ಯಕ್ಷ ಕೆ.ಕೆ.ಎಂ.ಕಾಮಿಲ್ ಸಖಾಫಿ, ಸಾಮುದಾಯಿಕ ಸಮ್ಮಿಲನದ ಪ್ರಧಾನ ಕಾರ್ಯದರ್ಶಿ ಅಬ್ದುರ್ರಝಾಕ್ ಅಲ್‌ಐನ್, ಎಸ್‌ವೈಎಸ್ ಕಾರ್ಯದರ್ಶಿ ಸಿದ್ದೀಕ್ ಸಖಾಫಿ ಮೂಳೂರು, ಸಅದೀಸ್ ಕರ್ನಾಟಕ ರಾಜ್ಯಾಧ್ಯಕ್ಷ ಅಶ್ರಫ್ ಸಅದಿ ಮಲ್ಲೂರು, ಡಿ.ಕೆ.ಉಮರ್ ಸಖಾಫಿ ಕಂಬಳಬೆಟ್ಟು, ಎಸ್ಸೆಸ್ಸೆಫ್ ದ.ಕ. ಜಿಲ್ಲಾಧ್ಯಕ್ಷ ಸಿರಾಜುದ್ದೀನ್ ಸಖಾಫಿ ಕನ್ಯಾನ, ಮಹಬೂಬ್ ಸಖಾಫಿ ಕಿನ್ಯ, ಕೆಸಿಎಫ್‌ನ ಅಬೂಬಕರ್ ಮದನಿ ಅಜ್ಮ್ಮಾನ್, ಸಲೀಂ ಕನ್ಯಾಡಿ ಸೌದಿ, ಸಮೀರ್ ದುಬೈ, ಅಬ್ದುಲ್ ರಹಿಮಾನ್ ಪ್ರಿಂಟೆಕ್ ಕೃಷ್ಣಾಪುರ, ಮುಸ್ತಫ ನಯೀಮಿ ಹಾವೇರಿ, ಕಾಸಿಂ ಪದ್ಮುಂಜ, ಅಲ್ತಾಫ್ ಕುಂಪಲ, ಮತ್ತಿತರರು ಉಪಸ್ಥಿತರಿದ್ದರು.
ಕನೆಕ್ಟ್-18 ಇದರ ಈ ಟೀಂ ಕನ್ವೀನರ್ ಹಾಫಿಳ್ ಯಾಕೂಬ್ ಸಅದಿ ನಾವೂರು ಸ್ವಾಗತಿಸಿದರು. ಎಸ್‌ವೈಎಸ್ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ ವಂದಿಸಿದರು.