ಪುಸ್ತಕ ಓದಿನಿಂದ ಮೌಲ್ಯಯುತ ಬದುಕು: ಸುರೇಂದ್ರ ಅಡಿಗ

ಕುಂದಾಪುರ, ನ.20: ಪುಸ್ತಕಗಳ ಓದು ಮನುಷ್ಯರಲ್ಲಿ ಮೌಲ್ಯಯುತ ಬದುಕು ಹೃದಯವಂತಿಕೆ ಹುಟ್ಟಿಸುತ್ತದೆ. ನಮಗೆ ಪುಸ್ತಕಗಳಿಂದ ಜ್ಞಾನವೂ ದೊರೆಯುತ್ತದೆ. ಓದಿನ ಮೂಲಕ ಮನುಷ್ಯನ ಮೈಂಡ್ ಸೆಟ್ ಮಾಡಿಕೊಳ್ಳುವುದು ಮುಖ್ಯ. ಇಂದಿನ ಟಿ.ವಿ. ಧಾರವಾಹಿಗಳು ಮನುಷ್ಯರನ್ನು ಮೂರ್ಖರನ್ನಾಗಿ ಮಾಡುತ್ತಿವೆ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದ್ದಾರೆ.
ಉಡುಪಿ ಜಿಲ್ಲಾ ಕೇಂದ್ರ ಗ್ರಂಥಾಲಯದ ಕುಂದಾಪುರ ಶಾಖೆಯ ವತಿ ಯಿಂದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಶಾಖಾ ಗ್ರಂಥಾ ಲಯದಲ್ಲಿ ನ.17ರಂದು ಆಯೋಜಿಸಲಾದ ಪುಸ್ತಕ ಪ್ರದರ್ಶನ ಹಾಗೂ ಸದಸ್ಯತ್ವ ಅಭಿಯಾನ, ಕುಂದಾಪುರ ಶಾಖಾ ಗ್ರಂಥಾಲಯ ವಿಸ್ತರಣಾ ಕಟ್ಟಡ ಹಾಗೂ ಬ್ರೌಸಿಂಗ್ ಸೆಂಟರ್ ಉದ್ಘಾಟನೆ ಹಾಗೂ ಸಿಬ್ಬಂದಿ ಸೇವಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತಿದ್ದರು.
ಕಾರ್ಯಕ್ರಮವನ್ನು ಕುಂದಾಪುರ ಪುರಸಭಾ ಸದಸ್ಯೆ ರೋಹಿಣಿ ಉದಯ ಕುಮಾರ್ ಉದ್ಘಾಟಿಸಿದರು. ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಉಪಾಧ್ಯಕ್ಷೆ ವಸಂತಿ ಶೆಟ್ಟಿ ಬ್ರಹ್ಮಾವರ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ.ಸತೀಶ ಕುಮಾರ ಎಸ್ ಹೊಮನಿ ಆಶಯ ನುಡಿಗಳನ್ನಾಡಿದರು.
ಕುಂದಾಪುರ ಪುರಸಭೆಯ ಮುಖ್ಯಾಧಿಕಾರಿ ಗೋಪಾಲಕೃಷ್ಣ ಮಾತನಾಡಿ ದರು. ಅತಿಹೆಚ್ಚು ಸದಸ್ಯರನ್ನು ನೊಂದಾಯಿಸಿದ ಮೇಲ್ವಿಚಾರಕರಾದ ಹೆಬ್ರಿ ಪುಷ್ಷಾವತಿ ಶೆಟ್ಟಿ, ಪಳ್ಳಿ ಸುಷ್ಮಾ, ಅನಗಳ್ಳಿ ಕಮಲ ಅವರನ್ನು ಗೌರವಿಸಲಾಯಿತು. ಉತ್ತಮ ಸಿಬ್ಬಂದಿ ಸೇವಾ ಪುರಸ್ಕಾರವನ್ನು ಅಲೆವೂರು ಸರಸ್ವತಿ, ನಾವುಂದ ಚಂದ್ರಾವತಿ, ಸಾಣೂರು ಜ್ಯೋತಿ ಅವರಿಗೆ ನೀಡಲಾಯಿತು.
ಉಡುಪಿ ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ನಳಿನಿ ಜಿ.ಐ. ಸ್ವಾಗತಿಸಿದರು. ದ್ವಿತೀಯ ದರ್ಜೆ ಸಹಾಯಕಿ ಶಕುಂತಳಾ ಕುಂದರ್ ವಿಜೇತರ ಬಹುಮಾನ ಪಟ್ಟಿ ವಾಚಿಸಿದರು. ಗ್ರಂಥಾಲಯ ಸಹಾ ಯಕಿ ಶ್ಯಾಮಲ ಸನ್ಮಾನಿತರ ಹೆಸರನ್ನು ವಾಚಿಸಿದರು. ಸಹಾಯಕ ಗ್ರಂಥಪಾಲಕಿ ವನಿತಾ ವಂದಿಸಿದರು. ಕುಂದಾಪುರ ಶಾಖಾ ಗ್ರಂಥಾಲಯದ ಗ್ರಂಥಾಲಯ ಸಹಾಯಕ ಜಗದೀಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.