ಬ್ರಹ್ಮಾವರ: ಜಿಲ್ಲಾ ಮಟ್ಟದ ಕಬ್-ಬುಲ್‌ಬುಲ್ ಉತ್ಸವ

ಬ್ರಹ್ಮಾವರ, ನ.20: ಇಲ್ಲಿನ ನಿರ್ಮಲಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಉಡುಪಿ ಜಿಲ್ಲಾ ಮಟ್ಟದ ಕಬ್-ಬುಲ್ ಬುಲ್ ಉತ್ಸವ ಎರಡು ದಿನಗಳ ಕಾಲ ನಡೆಯಿತು. ಉತ್ಸವವನ್ನು ಉಡುಪಿ ಸ್ನೇಹ ಟ್ಯುಟೋರಿಯಲ್‌ನ ಪ್ರಾಂಶುಪಾಲರಾದ ಉಮೇಶ್ ನಾಯ್ಕಾ ಅವರು ಉದ್ಘಾಟಿಸಿದರು.
ಜಿಲ್ಲಾ ಮುಖ್ಯ ಆಯುಕ್ತೆ ಶಾಂತಾ ವಿ.ಆಚಾರ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆಯ ವಿವಿಧ ಶಾಲೆಗಳಿಂದ 312 ವಿದ್ಯಾರ್ಥಿಗಳು, 22 ಶಿಕ್ಷಕರು ಹಾಗೂ 13 ಕಬ್ಸ್ ಮತ್ತು 13 ಬುಲ್ ಬುಲ್ ವಿದ್ಯಾರ್ಥಿಗಳು ಹಾಜರಿದ್ದರು.
ಜಿಲ್ಲಾ ಮುಖ್ಯ ಆಯುಕ್ತೆ ಶಾಂತಾ ವಿ.ಆಚಾರ್ಯ ಅವರು ಕಾರ್ಯಕ್ರಮದ ಅ್ಯಕ್ಷತೆವಹಿಸಿದ್ದರು.ಜಿಲ್ಲೆಯವಿವಿ ಶಾಲೆಗಳಿಂದ 312 ವಿದ್ಯಾರ್ಥಿಗಳು, 22 ಶಿಕ್ಷಕರು ಹಾಗೂ 13 ಕಬ್ಸ್ ಮತ್ತು 13 ಬುಲ್ ಬುಲ್ ವಿದ್ಯಾರ್ಥಿಗಳು ಹಾಜರಿದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಗುಣರತ್ನ, ಜಿಲ್ಲಾ ಸ್ಕೌಟ್ ಆಯುಕ್ತ ಡಾ.ವಿಜಯೇಂದ್ರ ವಸಂತ್, ಜಿಲ್ಲಾ ಕಾರ್ಯದರ್ಶಿ ಐ.ಕೆ. ಜಯಚಂದ್ರ ರಾವ್, ಜಿಲ್ಲಾ ಸ್ಕೌಟ್ ತರಬೇತಿ ಆಯುಕ್ತ ಬಿ.ಆನಂದ ಅಡಿಗ, ಜಿಲ್ಲಾ ಗೈಡ್ಸ್ ತರಬೇತಿ ಆಯುಕ್ತೆ ಸಾವಿತ್ರಿ ಮನೋಹರ್, ದೈಹಿಕ ಶಿಕ್ಷಣಾಧಿಕಾರಿ ಮಧುಕರ್, ಶಾಲಾ ಶಿಕ್ಷಕ-ರಕ್ಷಕ ಸಂಘದ ಪ್ರಭಾಕರ್ ಆಚಾರ್,ಆರ್.ಟಿ ಭಟ್ ಹಾಗೂ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಜಲ್ಲಿಕಲ್ಲುಗಳಿಂದ ಚಿತ್ರ ರಚನೆ, ಮುಖವಾಡ ತಯಾರಿ, ಬಿ.ಪಿ.ಚಿತ್ರ ರಚನೆ ದೇಶಭಕ್ತಿಗೀತೆ, ಅಭಿನಯ ಗೀತೆ, ತೆಂಗಿನ ಗರಿಗಳಿಂದ ಕರಕುಶಲ ವಸ್ತುಗಳ ತಯಾರಿ, ಬೆದರು ಗೊಂಬೆ ತಯಾರಿ, ಜನಪದ ನೃತ್ಯ, ನಗರ ಮೆರವಣಿಗೆ, ಭವ್ಯ ಶಿಬಿರಾಗ್ನಿ ಹೀಗೆ ಹಲವು ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗಹಿಸಿ ಬಹುಮಾನಗಳನ್ನು ಪಡೆದರು.