ಚೀನಾ: 5 ಉಪಗ್ರಹಗಳನ್ನು ಹೊತ್ತು ಬಾಹ್ಯಾಕಾಶಕ್ಕೆ ಹಾರಿದ ರಾಕೆಟ್
ಬೀಜಿಂಗ್, ನ. 20: ಚೀನಾ ಮಂಗಳವಾರ ಒಂದೇ ರಾಕೆಟ್ನಲ್ಲಿ ಒಂದು ಬಾಹ್ಯಾಕಾಶ ಪರಿಸರ ಸಂಶೋಧನಾ ಉಪಗ್ರಹ ಮತ್ತು ನಾಲ್ಕು ಕಿರು ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾಯಿಸಿದೆ.
ಲಾಂಗ್ ಮಾರ್ಚ್-2ಡಿ ರಾಕೆಟ್ ಈ ಉಪಗ್ರಹಗಳನ್ನು ಹೊತ್ತು ಬೆಳಗ್ಗೆ 7:40ಕ್ಕೆ ಜಿಯಕಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಹಾರಿತು ಎಂದು ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಉಪಗ್ರಹಗಳು ತಮ್ಮ ಪೂರ್ವನಿಗದಿತ ಕಕ್ಷೆಗೆ ಯಶಸ್ವಿಯಾಗಿ ಪ್ರವೇಶಿಸಿವೆ.
Next Story