ಕೋಡಿಜಾಲ್: ಕೊಣಾಜೆ ಎಫ್.ಸಿ. ಫುಟ್ಬಾಲ್ ತಂಡದ ಜೆರ್ಸಿ ಬಿಡುಗಡೆ

ಮಂಗಳೂರು, ನ. 20: ಕೋಡಿಜಾಲ್ ನ ಮರ್ಯಮ್ ಕೋಟೆಜ್ ನಲ್ಲಿ ನಡೆದ ಕೊಣಾಜೆ ಎಫ್.ಸಿ. ತಂಡದ ಜೆರ್ಸಿ ಬಿಡುಗಡೆ ಸಮಾರಂಭದ ಸರಳ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರೂ ಹಾಗೂ ಮುಡಾ ಮಾಜಿ ಅಧ್ಯಕ್ಷರೂ ಆದ ಹಾಜಿ ಇಬ್ರಾಹಿಂ ಕೋಡಿಜಾಲ್ ಅವರು ತಂಡದ ಕಪ್ತಾನ ಶಾಝಿರ್ ಅವರಿಗೆ ಜೆರ್ಸಿ ನೀಡುವ ಮೂಲಕ ಅನಾವರಣಗೊಳಿಸಿದರು.
ಕೊಣಾಜೆಯ ಯುವ ಫುಟ್ಬಾಲ್ ಪಟುಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಎಜಿಟಿ (ಟ್ರೇಡಿಂಗ್) ದಮಾಮ್ ಇದರ ಮ್ಯಾನೇಜಿಂಗ್ ಪಾರ್ಟ್ನರ್ ರಿಯಾಝ್ ಕೋಡಿಜಾಲ್ ಫುಟ್ಬಾಲ್ ತಂಡಕ್ಕೆ ಜೆರ್ಸಿಯನ್ನು ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಕೆಎಸ್, ಕೊಣಾಜೆ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಸೂಫಿ ಕುಂಞಿ, ಫಜೀರ್ ಗ್ರಾಮ ಪಂಚಾಯತ್ ಸದಸ್ಯರಾದ ರಫೀಕ್ ಫಜೀರ್, ಅಬ್ದುಲ್ ಖಾದರ್ ಕೆಎಸ್, ಹಸನ್ ಕುಂಞಿ ಕೆಎಂ, ಇಬ್ರಾಹಿಂ ಕೆಎಂ, ಮನ್ಸೂರ್ ಎನ್ ಎಂ, ಇಬ್ರಾಹಿಂ ಕರೀಂ, ಫೈಝಲ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Next Story