ರೈಲಿನಡಿ ಬಿದ್ದರೂ ಪವಾಡಸದೃಶವಾಗಿ ಪಾರಾದ ಹಸುಳೆ!
ಮಥುರಾ, ನ.21: ಒಂದು ವರ್ಷದ ಹಸುಳೆಯೊಂದು ರೈಲಿನಡಿ ಬಿದ್ದರೂ ಯಾವುದೇ ಗಾಯವಿಲ್ಲದೆ ಪಾರಾದ ಘಟನೆ ಉತ್ತರಪ್ರದೇಶದ ಮಥುರಾ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.
ಮಗುವಿನ ತಂದೆ ಆಕಸ್ಮಿಕವಾಗಿ ತಾಯಿಯನ್ನು ತಳ್ಳಿದ ಕಾರಣ ಹಸುಳೆ ರೈಲು ಹಳಿ ಮೇಲೆ ಬಿದ್ದಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಹಸುಳೆ ರೈಲು ಹಳಿಗಳ ಮಧ್ಯೆ ಬಿದ್ದ ಕಾರಣ ರೈಲು ಹಾದುಹೋದರೂ ಏನೂ ಆಗಿಲ್ಲ. ರೈಲು ಮಗುವಿನ ಮೇಲೆ ಹಾದುಹೋದ ಬಳಿಕ ವ್ಯಕ್ತಿಯೊಬ್ಬ ಪ್ಲಾಟ್ಫಾರ್ಮ್ನಿಂದ ಇಳಿದು ಮಗುವನ್ನು ಎತ್ತಿಕೊಂಡು ಹೆತ್ತವರಿಗೆ ನೀಡಿದ್ದಾನೆ. ಹೆಣ್ಣು ಮಗು ಪವಾಡ ಸದೃಶದಿಂದ ಪಾರಾದ ದೃಶ್ಯ ಇದೀಗ ಎಲ್ಲೆಡೆ ವೈರಲ್ ಆಗಿದೆ.
#WATCH: One-year-old girl escapes unhurt after a train runs over her at Mathura Railway station. pic.twitter.com/a3lleLhliE
— ANI UP (@ANINewsUP) November 20, 2018
Next Story