Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಚಿಕ್ಕಮಗಳೂರಿನ ಬಾಲಕನಿಗೆ ಒಲಿದ ಏಷ್ಯಾ...

ಚಿಕ್ಕಮಗಳೂರಿನ ಬಾಲಕನಿಗೆ ಒಲಿದ ಏಷ್ಯಾ ಬುಕ್ ಆಫ್ ರೆಕಾರ್ಡ್ ಗೌರವ

ಚಿತ್ರಕಲೆಯಲ್ಲಿ ಖ್ಯಾತಿ ಗಳಿಸುತ್ತಿರುವ ಮಲೆನಾಡಿನ ಯುವ ಪ್ರತಿಭೆ ಹಮ್ದಿ ಇಮ್ರಾನ್

ವಾರ್ತಾಭಾರತಿವಾರ್ತಾಭಾರತಿ21 Nov 2018 8:44 PM IST
share
ಚಿಕ್ಕಮಗಳೂರಿನ ಬಾಲಕನಿಗೆ ಒಲಿದ ಏಷ್ಯಾ ಬುಕ್ ಆಫ್ ರೆಕಾರ್ಡ್ ಗೌರವ

ಚಿಕ್ಕಮಗಳೂರು, ನ.21: 'ಬೆಳೆಯುವ ಸಿರಿ ಮೊಳಕೆಯಲ್ಲಿ' ಎಂಬ ಗಾದೆ ಮಾತಿನಂತೆ ಎಳೆಯ ವಯಸ್ಸಿನಲ್ಲಿ ಮಕ್ಕಳ ಆಸಕ್ತಿ ಗುರುತಿಸಿ ಪ್ರೋತ್ಸಾಹದ ಸಹಕಾರ ನೀಡಿದರೆ ಮಕ್ಕಳು ಏನು ಬೇಕಾದರೂ ಸಾಧಿಸಬಲ್ಲರು ಎಂಬುದಕ್ಕೆ ಚಿಕ್ಕಮಗಳೂರು ನಗರದ ಬಾಲಕನೊಬ್ಬ ತನ್ನ ಇಚ್ಛೆಯ ಪ್ರತಿಭೆಯಲ್ಲಿ ಛಾಪು ಮೂಡಿಸಿ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ಜಿಲ್ಲೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾನೆ.

ನಗರದ ವಾಸವಿ ವಿದ್ಯಾಸಂಸ್ಥೆಯಲ್ಲಿ ಎಸೆಸೆಲ್ಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯೊಬ್ಬ ತನಗೆ ಒಲಿದಿರುವ ಚಿತ್ರಕಲೆಯಲ್ಲಿ ಎಲ್ಲರೂ ಅಚ್ಚರಿ ಪಡುವಂತಹ ಸಾಧನೆ ಮಾಡಿದ್ದಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಕಿರಿಯ ವರ್ಣಚಿತ್ರ ಕಲಾವಿದ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ, ಇದೀಗ ಏಷ್ಯಾ ಬುಕ್ ಆಫ್ ರೆಕಾರ್ಡ್‍ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಮೂಲಕ ತನ್ನ ಕಲಾಸೇವೆಯ ಸಾಧನೆಯ ಹಾದಿಯಲ್ಲಿ ಮತ್ತೊಂದು ಮೈಲಿಗಲ್ಲು ದಾಟಿದ್ದಾನೆ.

ನಗರದ ನಿವಾಸಿಗಳಾದ ಶಾಹಿದಾ ಶಬಾನ ಹಾಗೂ ಖಾಲಿದ್ ಇಮ್ರಾನ್‍ರ ಮಗನಾಗಿರುವ ಹಮ್ದಿ ಇಮ್ರಾನ್ ಈ ಸಾಧಕನಾಗಿದ್ದು, ವಾಸವಿ ವಿದ್ಯಾಸಂಸ್ಥೆಯ ಜಾಣ ವಿದ್ಯಾರ್ಥಿಯಾಗಿರುವ ಇಮ್ರಾನ್‍ಗೆ ಈಗಿನ್ನೂ 15 ವರ್ಷ. ಎಳೆಯ ವಯಸ್ಸಿನಲ್ಲೇ ಜಗತ್ತಿನ ಕಲಾ ರಸಿಕರ ಮನ ಗೆಲ್ಲುವಲ್ಲಿ ಯಶ ಕಂಡಿದ್ದಾನೆ. ವರ್ಣಚಿತ್ರಕಲೆಯಲ್ಲಿ ಎಳೆಯ ವಯಸ್ಸಿನಲ್ಲೇ ಪರಿಣತಿ ಸಾಧಿಸಿರುವ ಇಮ್ರಾನ್ ತಾನು ಭಾಗವಹಿಸಿದ ಎಲ್ಲ ಜಿಲ್ಲಾ, ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಗಳಲ್ಲೂ ಪ್ರಥಮ ಸ್ಥಾನ ಪಡೆದು ಪ್ರಶಸ್ತಿಗಳನ್ನು ಬಾಚಿಕೊಂಡಿರುವುದಲ್ಲದೇ ಇದೀಗ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗೆ ಪಾತ್ರನಾಗಿರುವುದು ಜಿಲ್ಲೆಯ ಚಿತ್ರಕಲಾ ಪ್ರೇಮಿಗಳ ಸಂತಸಕ್ಕೆ ಪಾರವಿಲ್ಲದಂತಾಗಿದೆ.

ಬಾಲಕ ಇಮ್ರಾನ್‍ನ ತಂದೆಯಾಗಲೀ, ತಾಯಿಯಾಗಲೀ ಚಿತ್ರಕಲೆಯ ಗಂಧಗಾಳಿ ತಿಳಿಯದವರು. ಆತನ ಇಡೀ ಕಟುಂಬದಲ್ಲೂ ಚಿತ್ರಕಲೆ ತಿಳಿದವರು ಯಾರೂ ಇಲ್ಲ. ಆದರೆ ಏಳೆಯ ವಯಸ್ಸಿನಲ್ಲಿ ಹೆತ್ತವರ ತೋಟದ ಮನೆಯಲ್ಲಿ ತಾಯಿಯೊಂದಿಗೆ ಏಕಾಂಗಿಯಾಗಿರುತ್ತಿದ್ದ ಇಮ್ರಾನ್  ಮನೆಯ ಗೋಡೆಗಳ ಮೇಲೆಲ್ಲ ಗೀಚುತ್ತಾ ಗೋಡೆಗಳ ಅಂದ ಗೆಡಿಸುತ್ತಿದ್ದ. ಒಮ್ಮೆ ಈತ ಗೋಡೆಗಳ ಮೇಲೆ ಈತ ಮೂಡಿಸಿದ್ದ ಚಿತ್ತಾರವನ್ನು ಗಮನಿಸಿದ ಪೋಷಕರು ಆತನಲ್ಲಿ ಹುದುಗಿದ್ದ ಕಲಾ ಪ್ರತಿಭೆಯನ್ನು ಬಾಲ್ಯದಲ್ಲೇ ಗುರುತಿಸುವಲ್ಲಿ ಯಶಸ್ವಿಯಾಗಿದ್ದರು. ತಡ ಮಾಡದ ಅವರು, ಆತನ ಪ್ರತಿಭೆಗೆ ನೀರೆರೆಯಲಾರಂಭಿಸಿದರು. 

ಇಮ್ರಾನ್ ತನ್ನ ನಾಲ್ಕನೇ ವಯಸ್ಸಿನಲ್ಲಿಯೇ ವರ್ಣಚಿತ್ರಕಲೆಯಲ್ಲಿ ಭಾರೀ ಆಸಕ್ತಿ ಹೊಂದಿದ್ದ. ಶಾಲಾ ದಿನಗಳಲ್ಲಿ ಚಿತ್ರಕಲಾ ಶಿಕ್ಷಕರೊಂದಿಗೆ ಒಂದಿಷ್ಟು ತರಬೇತಿ ಕೊಡಿಸಿದ ಪೋಷಕರಿಗೆ ಇಮ್ರಾನ್ ಚಿತ್ರಕಲೆಯಲ್ಲಿ ತನಗಿರುವ ಆಸಕ್ತಿ, ಪ್ರೌಢಿಮೆಯನ್ನು ಕೆಲವೇ ದಿನಗಳಲ್ಲಿ ಸಾಧಿಸಿ ತೋರಿಸಿದ್ದ. ನಂತರ ಹಿಂದಿರುಗಿ ನೋಡದ ಈ ಬಾಲಕ ತನ್ನ ಪೋಷಕರು ನೀಡಿದ ಪ್ರೋತ್ಸಾಹದಿಂದಾಗಿ ಇಂದು ಚಿತ್ರಕಲೆ ಕ್ಷೇತ್ರದಲ್ಲಿ ಎಳೆ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಕಲಾ ಪ್ರೇಮಿಗಳ ಮನಗೆದ್ದಿದ್ದಾನೆ.

ಇಮ್ರಾನ್ ಇದುವರೆಗೂ ವಿವಿಧ ಮಾಧ್ಯಮಗಳಲ್ಲಿ 400ಕ್ಕೂ ಹೆಚ್ಚು ಅತ್ಯಾಕರ್ಷಕ ಚಿತ್ರಗಳನ್ನು ರಚಿಸಿದ್ದು, ಆತನ ಕಲಾ ಕುಂಚದಲ್ಲರಳಿದ ವರ್ಣಚಿತ್ರಗಳು ಅತ್ಯಾಕರ್ಷಕವಾಗಿದ್ದು, ಬಹುತೇಕ ಚಿತ್ರಗಳು ಸಾಕಷ್ಟು ಬಹುಮಾನಗಳನ್ನು ಗಿಟ್ಟಿಸಿಕೊಂಡಿವೆ. ಅಪೂರ್ವವಾದ ನವ್ಯ ಹಾಗೂ ಭಾವಚಿತ್ರಗಳು, ಸಾಂದರ್ಭಿಕ ಚಿತ್ರಗಳು, ಹಲವು ಮಾದರಿಯ ಯಥಾದರ್ಶನ ನೀತಿಯ ಚಿತ್ರಕಲೆಗಳಲ್ಲಿ ಹಮ್ದಿ ಇಮ್ರಾನ್ ಅಪ್ರತಿಮ ಸಾಧನೆ ತೋರಿದ್ದಾನೆ. ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಸೇರಿದಂತೆ ಹಲವಾರು ರಾಷ್ಟ್ರಮಟ್ಟದ, ಅಂತಾರಾಷ್ಟ್ರೀಯ ಮಟ್ಟದ ಚಿತ್ರಕಲಾ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಈ ಬಾಲಕ ಪ್ರತಿಷ್ಠಿತ ಅಂತಾರಾಷ್ಟ್ರೀಯ ಪಿಕಾಸೋ ಸಂಸ್ಥೆ ಪ್ರತೀ ಮೂರು ತಿಂಗಳಿಗೊಮ್ಮೆ ಆಯೋಜಿಸುವ ಆನ್‍ಲೈನ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಜಗತ್ತಿನ ಚಿತ್ರಕಲಾವಿದರ ಗಮನಸೆಳೆದಿದ್ದಾನೆ. ಹಮ್ದಿ ಇಮ್ರಾನ್ ಎಂದು ಗೂಗಲ್ ಸರ್ಚ್‍ನಲ್ಲಿ ಹುಡುಕಿದರೆ ಇಮ್ರಾನ್ ಕುಂಚದಲ್ಲಿ ಅರಳಿದ ಪ್ರಬುದ್ಧ ದೃಶ್ಯಕಾವ್ಯಗಳು, ನೂರಾರು ಚಿತ್ರಕಲೆಗಳು ಅನಾವರಣಗೊಳ್ಳುತ್ತವೆ. 

ಹಮ್ದಿ ಇಮ್ರಾನ್ ಚಿಕ್ಕ ವಯಸ್ಸಿನಲ್ಲಿ ಚಿತ್ರ ಬರೆಯುವ ಹವ್ಯಾಸ ಬೆಳೆಸಿಕೊಂಡಿದ್ದ. ಶಾಲೆಗೆ ಸೇರಿದ ನಂತರ 3ನೇ ತರಗತಿಯಲ್ಲಿದ್ದಾಗ ರಾಜ್ಯ ಸರಕಾರ ನಡೆಸುವ ಪ್ರತಿಭಾ ಕಾರಂಜಿ ಸ್ಫರ್ಧೆಯಲ್ಲಿ ಪಾಲ್ಗೊಂಡಿದ್ದ. ಮಗನಲ್ಲಿರುವ ಚಿತ್ರ ಬರೆಯುವ ಹವ್ಯಾಸವನ್ನು ಗಮನಿಸಿ ಆತನಿಗೆ ಪ್ರೋತ್ಸಾಹ ನೀಡಿದೆವು. ಚಿತ್ರಕಲಾ ಶಿಕ್ಷಕರಾದ ಕಟ್ಟಿಮನಿ, ಪೂರ್ಣಿಮಾ ಮಹೇಶ್, ಇಂದಿರಾ ಕುಶಕುಮಾರ್, ಭಾಗವಾನ್, ಗಣೇಶ್ ಆಚಾರ್ಯ, ವಿಶ್ವಕರ್ಮ ಆಚಾರ್ಯ ಸೇರಿದಂತೆ  ಶಾಲೆಯ ಶಿಕ್ಷಕರು ಆತನಿಗೆ ಉತ್ತೇಜನ ನೀಡಿದರು. ಹಮ್ದಿ ಇಮ್ರಾನ್ ಬರೆದ ವರ್ಣಚಿತ್ರಗಳಿಗೆ ಇದುವರೆಗೂ ಹಲವು ಪ್ರಶಸ್ತಿಗಳು ಬಂದಿವೆ. ಕಳೆದ ವರ್ಷ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರವೇಶಿಸಿದ್ದ, ಇದೀಗ ಏಷ್ಯ ಬುಕ್ ಆಫ್ ರೆಕಾರ್ಡ್ ಪ್ರವೇಶಿಸಿದ್ದಾನೆ. ನ.10 ರಂದು ಏಷ್ಯಾ ಬುಕ್ ಆಫ್ ರೆಕಾರ್ಡ್‍ನಿಂದ ಪ್ರಶಸ್ತಿ ಪತ್ರ ಬಂದಿದೆ.
- ಶಾಹಿದಾ ಶಬಾನ, ಇಮ್ರಾನ್‍ನ ತಾಯಿ

ಹಮ್ದಿ ಇಮ್ರಾನ್ ವರ್ಣಚಿತ್ರ ರಚನೆಯಲ್ಲಿ ಉತ್ತಮ ಆಸಕ್ತಿ ಹೊಂದಿದ್ದಾನೆ. ಮಗುವಿನ ಆಸಕ್ತಿಗೆ ಅನುಗುಣವಾಗಿ ಪೋಷಕರು ಪ್ರೋತ್ಸಾಹ ನೀಡಿದ್ದರಿಂದ ಇಂತಹ ಸಾಧನೆ ಮಾಡಲು ಸಾಧ್ಯವಾಯಿತು. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಅವರು ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂಬುದಕ್ಕೆ ಈತ ಒಳ್ಳೆಯ ಸಾಕ್ಷಿಯಾಗಿದ್ದಾನೆ. ಪೋಷಕರು ತಮ್ಮ ಮಕ್ಕಳು ಇಂಜಿನಿಯರ್ ಆಗಲಿ, ವೈದ್ಯರಾಗಲಿ ಎಂದು ಹಂಬಲಿಸುವ ಬದಲು ಅವರಲ್ಲಿರುವ ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು.
- ಕಟ್ಟಿಮನಿ, ಚಿತ್ರಕಲಾ ಶಿಕ್ಷಕ 

ವರ್ಣಚಿತ್ರ ರಚನೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು, ವರ್ಣಚಿತ್ರ ರಚನೆಯಲ್ಲೇ ಹೆಚ್ಚಿನ ಸಾಧನೆ ಮಾಡುವ ಆಸಕ್ತಿ ಹೊಂದಿದ್ದೇನೆ. ಭವಿಷ್ಯದಲ್ಲಿ ಆರ್ಕಿಟೆಕ್ ಆಗುವ ಗುರಿ ಹೊಂದಿದ್ದೇನೆ. ತಾನು ಏನೇ ಮಾಡಿದ್ದರೂ ಇದಕ್ಕೆ ತನ್ನ ಪೋಷಕರು ಹಾಗೂ ಮಾರ್ಗದರ್ಶನ ನೀಡಿದ ಶಿಕ್ಷಕರೇ ಕಾರಣ.
-ಹಮ್ದಿ ಇಮ್ರಾನ್

 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X