ನಿವೇಶನರಹಿತರ ವಸತಿ ಸಮುಚ್ಚಯಕ್ಕೆ ಎನ್‌ಬಿಸಿ ಪ್ರಕಾರ ಪ್ರಸ್ತಾವನೆ: ಉಡುಪಿ ನಗರಾಶ್ರಯ ಸಮಿತಿಯಲ್ಲಿ ತೀರ್ಮಾನ

ಉಡುಪಿ, ನ.21: ಉಡುಪಿ ಶಾಸಕ ರಘುಪತಿ ಭಟ್ ಅಧ್ಯಕ್ಷತೆಯಲ್ಲಿ ನಗರಾಶ್ರಯ ಸಮಿತಿಯ ಸಭೆಯು ಬುಧವಾರ ಉಡುಪಿ ನಗರಸಭೆಯ ಸ್ಯ ಮೂರ್ತಿ ಸಭಾಂಗಣದಲ್ಲಿ ಜರಗಿತು.
ಬಂದಿರುವ ಅರ್ಜಿಗಳನ್ನು ಸಮಿತಿ ಪರಿಶೀಲಿಸಿ, ವಾಜಪೇಯಿ ನಗರ ವಸತಿ ಯೋಜನೆಯಡಿ ಒಟ್ಟು 85 ಫಲಾನುಭವಿಗಳನ್ನು ಹಾಗೂ ಡಾ.ಬಿ.ಆರ್ ಅಂಬೆಡ್ಕರ್ ನಿವಾಸಿ ಯೋಜನೆಯಡಿಯಲ್ಲಿ ಒಟ್ಟು 65 ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು.
ಈ ಹಿಂದೆ ಉಡುಪಿ ನಗರಸಭಾ ವ್ಯಾಪ್ತಿಯ ಹೆರ್ಗಾ ಮತ್ತು ಶಿವಳ್ಳಿ ಗ್ರಾಮ ದಲ್ಲಿ ಗುರುತಿಸಿರುವ 11 ಎಕರೆ ನಿವೇಶನದಲ್ಲಿ 697 ಫಲಾನುಭವಿಗಳಿಗೆ ವಸತಿ ನೀಡುವ ಕುರಿತು ವಸತಿ ಸಮುಚ್ಚಯ ನಿರ್ಮಿಸಲು ಕ್ರಿಯಾ ಯೋಜನೆ ಮಂಜೂರಾತಿಗಾಗಿ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮಕ್ಕೆ ಕಳುಹಿಸ ಲಾಗಿತ್ತು. ಆದರೆ ನಿಗಮದಿಂದ ಪ್ರಸ್ತುತ ನ್ಯಾಷನಲ್ ಬಿಲ್ಡಿಂಗ್ ಕೋಡ್ (ಎನ್‌ಬಿಸಿ) ಪ್ರಕಾರ ಕ್ರಿಯಾ ಯೋಜನೆ ತಯಾರಿಸಿ ಮರು ಸಲ್ಲಿಸುವಂತೆ ಸೂಚಿಸಿ ಪ್ರಸ್ತಾವನೆಯನ್ನು ಹಿಂತಿರುಗಿಸಲಾಗಿದೆ.
ಈ ಬಗ್ಗೆ ಸಭೆಯಲ್ಲಿ ಶಾಸಕರು ಚರ್ಚಿಸಿ ಎನ್‌ಬಿಸಿ ಪ್ರಕಾರವೆ ಡಿಪಿಆರ್ ತಯಾರಿಸಿ ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಇದರ ಪ್ರಕಾರವೇ ಫಲಾನುಭವಿಗಳನ್ನು ಆಯ್ಕೆ ಮಾಡುವ ಕುರಿತು ಸಭೆಯಲ್ಲಿ ತೀರ್ಮಾನಿಸಲಾಯಿತು.
ಉಡುಪಿ ತಾಲೂಕು ಪುತ್ತೂರು ಗ್ರಾಮದ ಸುಬ್ರಹ್ಮಣ್ಯ ನಗರ ವಾರ್ಡಿನ ಲಿಂಗೋಟುಗುಡ್ಡೆಯಲ್ಲಿ 0.63 ಎಕರೆ ಜಮೀನಿನಲ್ಲಿ ಒಟ್ಟು 36 ಫಲಾನುಭವಿ ಗಳನ್ನು ಆಯ್ಕೆ ಮಾಡಿ ಹಕ್ಕುಪತ್ರ ನೀಡಲಾಗಿದ್ದು, ಪ್ರಸ್ತುತ ಈ ಬಗ್ಗೆ ಉಚ್ಚ ನ್ಯಾಯಾಲಯದಲ್ಲಿ ದಾವೆ ಇರುವುದರಿಂದ ಈ ಬಗ್ಗೆ ದೂರುದಾರರು ಮತ್ತು ಫಲಾನುಭವಿ ಗಳನ್ನು ಕರೆಸಿ ಮಾತುಕತೆಯ ಮೂಲಕ ಪರಿಹಾರ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯಲ್ಲಿ ಉಡುಪಿ ನಗರಾಸಭಾ ಪೌರಾಯುಕ್ತ ಆನಂದ್ ಕಲ್ಹೋಲಿಕರ್, ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್, ಉಡುಪಿ ತಾಪಂ ಕಾರ್ಯ ನಿರ್ವಹಣಾಧಿಕಾರಿ ಮೋಹನ್‌ರಾಜ್, ಇಲಾಖೆಯ ಅಧಿಕಾರಿ, ಗ್ರಾಮ ಕರಣಿಕರು, ನಗರಸಭೆಯ ಕಂದಾಯ ಅಧಿಕಾರಿ ಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.