ಹೂಡೆಯಲ್ಲಿ ಮಿಲಾದ್ ರ್ಯಾಲಿ

ಉಡುಪಿ, ನ.21: ಪ್ರವಾದಿ ಮುಹಮ್ಮದ್ ಮುಸ್ತಫ (ಸ) ಅವರ ಜನ್ಮದಿನದ ಪ್ರಯುಕ್ತ ಹೂಡೆಯಲ್ಲಿ ಬುಧವಾರ ಮೀಲಾದುನ್ನಬಿ ರ್ಯಾಲಿಯನ್ನು ಹಮ್ಮಿಕೊಳ್ಳ ಲಾಗಿತ್ತು
ಅಲ್‌ಹಾಜ್ ಖಾಝಿ ಮುಹಮ್ಮದ್ ಇಸ್ಮಾಯಿಲ್ ಸಾಹೇಬ್ ನೇತೃತ್ವದಲ್ಲಿ ಹೂಡೆ ದಾರುಸ್ಸಲಾಂ ಮದರಸದಿಂದ ಹೊರಟ ರ್ಯಾಲಿಯು ದರ್ಗಾ ಹಾಗೂ ಹೂಡೆ ಪೇಟೆಯಲ್ಲಿ ಸಾಗಿ ಮರಳಿ ಮದರಸದಲ್ಲಿ ಸಮಾಪ್ತಿಗೊಂಡಿತು. ರ್ಯಾಲಿ ಯಲ್ಲಿ ಮದ್ರಸ ಮಕ್ಕಳ ಧಪ್ ಆಕರ್ಷಣೀಯವಾಗಿತ್ತು.
Next Story