ಗಂಗೊಳ್ಳಿಯಲ್ಲಿ ಬೃಹತ್ ಮೀಲಾದುನ್ನಬಿ ಮೆರವಣಿಗೆ

ಕುಂದಾಪುರ, ನ.21: ಪ್ರವಾದಿ ಮುಹಮ್ಮದ್ ಮುಸ್ತಫ(ಸ) ಅವರ ಜನ್ಮ ದಿನದ ಪ್ರಯುಕ್ತ ಗಂಗೊಳ್ಳಿಯಲ್ಲಿ ಬುಧವಾರ ಮೀಲಾದುನ್ನಬಿ ಮೆರವಣಿಗೆ ನಡೆಯಿತು.
ಗಂಗೊಳ್ಳಿ ಜುಮಾ ಮಸೀದಿಯಲ್ಲಿ ಸುಲ್ತಾನ್ ಮಸೀದಿ ಖತೀಬ್ ಹೈದ ರಾಲಿ ಮಿಸ್ಬಾಹಿ, ಬದ್ರಿಯಾ ಮಸೀದಿ ಖತೀಬ್ ಅಬ್ದುಲ್ ಜಬ್ಬಾರ್ ಸಖಾಫಿ ದುವಾ ನೆರವೇರಿಸಿದರು. ಬಳಿಕ ಹೊರಟ ರ್ಯಾಲಿಯು ಮುಖ್ಯರಸ್ತೆ, ಬಂದರು ಪ್ರದೇಶ, ಬೀಚ್ ರೋಡ್ ಮೂಲಕ ಸಾಗಿ ಜುಮಾ ಮಸೀದಿಯಲ್ಲಿ ಸಮಾಪ್ತಿ ಗೊಂಡಿತು.
ಈ ಸಂದರ್ಭದಲ್ಲಿ ಈದ್ ಮಿಲಾದ್ ಕಮಿಟಿ ಅಧ್ಯಕ್ಷ ಮುಹಮ್ಮದ್ ಸುಬಾನ್, ಜಮಾತುಲ್ ಮುಸ್ಲಿಮೀನ್ ಅಧ್ಯಕ್ಷ ರಫೀಕ್ ಸಾಹೇಬ್ ಪೂಕೋಯ, ಹಾಜಿ ಅಬ್ದುಲ್ ಮಜೀದ್, ಎಚ್.ಅಬ್ದುಲ್ ಹಮೀದ್ ಮೊದ ಲಾದವರು ಉಪಸ್ಥಿತರಿದ್ದರು.
Next Story