ತೈಲ ಬೆಲೆ ಇಳಿಕೆ: ಸೌದಿ ಅರೇಬಿಯಕ್ಕೆ ಟ್ರಂಪ್ ಧನ್ಯವಾದ
ವಾಶಿಂಗ್ಟನ್, ನ. 21: ತೈಲ ಬೆಲೆ ಇಳಿಮುಖವಾಗಿರುವುದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಸೌದಿ ಅರೇಬಿಯಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.
‘‘ತೈಲ ಬೆಲೆಗಳು ಇಳಿಯುತ್ತಿವೆ. ಒಳ್ಳೆಯದು! ಇದು ಅಮೆರಿಕ ಮತ್ತು ಜಗತ್ತಿಗೆ ದೊಡ್ಡ ತೆರಿಗೆ ಕಡಿತದಂತೆ ಬಂದಿದೆ. ಈಗ 54 ಡಾಲರ್ (ಬ್ಯಾರಲ್ಗೆ). ಅದು ಒಮ್ಮೆ 82 ಡಾಲರ್ ಆಗಿತ್ತು’’ ಎಂದು ಅವರು ಟ್ವೀಟ್ ಮಾಡಿದ್ದಾರೆ.
‘‘ಧನ್ಯವಾದಗಳು ಸೌದಿ ಅರೇಬಿಯ, ಆದರೆ, ಬೆಲೆ ಇನ್ನೂ ಕಡಿಮೆಯಾಗಲಿ!’’ ಎಂದು ಅವರು ಹೇಳಿದ್ದಾರೆ.
Next Story