ಟಿಆರ್‌ಎಸ್‌ನ ಕೊಂಡ ವಿಶ್ವೇಶ್ವರ ರೆಡ್ಡಿ ಕಾಂಗ್ರೆಸ್‌ಗೆ
ಹೈದರಾಬಾದ್, ನ. 21: ವಿವಿಧ ಮಟ್ಟದಲ್ಲಿ ನಿರಾಶೆಯಾಗಿದೆ ಎಂದು ಉಲ್ಲೇಖಿಸಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಎರ್‌ಎಸ್)ಗೆ ಲೋಕಸಭಾ ಸದಸ್ಯ ಕೊಂಡ ವಿಶ್ವೇಶ್ವರ ರೆಡ್ಡಿ ರಾಜೀನಾಮೆ ನೀಡಿದ ದಿನದ ಬಳಿಕ ಎಐಸಿಸಿ ತೆಲಂಗಾಣ ಉಸ್ತುವಾರಿ ಆರ್.ಸಿ. ಖುಂಟಿಯಾ ಬುಧವಾರ ರೆಡ್ಡಿ ಅವರು ಕಾಂಗ್ರೆಸ್‌ಗೆ ಸೇರಲಿದ್ದಾರೆ ಎಂದು ಹೇಳಿದ್ದಾರೆ. ರೆಡ್ಡಿ ಅವರು ಬುಧವಾರ ಹೊಸದಿಲ್ಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ ಹಾಗೂ ಪಕ್ಷ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಖುಂಟಿಯಾ ತಿಳಿಸಿದ್ದಾರೆ.
ಮೆಡ್‌ಚಾನ್‌ನಲ್ಲಿ ನವೆಂಬರ್ 23ರಂದು ನಡೆಯಲಿರುವ ರ್ಯಾಲಿಯಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ರೆಡ್ಡಿ ಅವರು ಔಪಚಾರಿಕವಾಗಿ ಕಾಂಗ್ರೆಸ್ ಸೇರಲಿದ್ದಾರೆ ಎಂದು ಅವರು ಹೇಳಿದ್ದಾರೆ.
ವಿಶ್ವೇಶ್ವರ ಅವರು ಈ ನಿರ್ಧಾರ ತೆಗೆದುಕೊಂಡಿರುವುದು ದುರಾದೃಷ್ಟಕರ ಎಂದು ಕರೀಮ್‌ನಗರದ ಟಿಆರ್‌ಎಸ್ ಲೋಕಸಭಾ ಸದಸ್ಯ ಬಿ. ವಿನೋದ್ ಕುಮಾರ್ ಹೇಳಿದ್ದಾರೆ.
Next Story