ಕಾಸರಗೋಡು: ಬೈಕ್ ರ್ಯಾಲಿಗೆ ತಂಡದಿಂದ ಕಲ್ಲು ತೂರಾಟ

ಕಾಸರಗೋಡು, ನ. 21: ಬೈಕ್ ರ್ಯಾಲಿ ನಡೆಸುತ್ತಿದ್ದ ತಂಡದ ಮೇಲೆ ಗುಂಪೊಂದು ಕಲ್ಲು, ಬಾಟ್ಲಿ ಎಸೆದ ಘಟನೆ ಕರಂದಕ್ಕಾಡ್ ನಲ್ಲಿ ಮಂಗಳವಾರ ಸಂಜೆ ನಡೆದಿದ್ದು, ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನೆಯ ವೀಡಿಯೊ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. ಮೀಲಾದುನ್ನಬಿ ಪ್ರಯುಕ್ತ ಮಂಗಳವಾರ ಸಂಜೆ ಯುವಕರು ಬೈಕ್ ರ್ಯಾಲಿ ಆಯೋಜಿಸಿದ್ದರು. ಈ ಸಂದರ್ಭ ಗುಂಪೊಂದು ಕಲ್ಲು, ಬಾಟ್ಲಿಗಳನ್ನು ಎಸೆದಿದ್ದು, ಸ್ಥಳಕ್ಕೆ ಬಂದ ಪೊಲೀಸರು ನಿಯಂತ್ರಣಕ್ಕೆ ತಂದಿದ್ದಾರೆ. ಕಲ್ಲೆಸೆದವರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.
Next Story