ಮಂಗಳೂರು: ಯುವಕ ನಾಪತ್ತೆ

ಮಂಗಳೂರು, ನ.21: ಶ್ಯಾಮಲಾ ಎಂಬವರ ಪುತ್ರ ಗಿರೀಶ್ (30) ಕೆಲಸಕ್ಕೆಂದು ಹೋದವರು ವಾಪಸಾಗದೇ ನಾಪತ್ತೆಯಾದ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗಿರೀಶ್ ಎಂದಿನಂತೆ ನ.16ರಂದು ಬೆಳಗ್ಗೆ 8 ಗಂಟೆಗೆ ಕೆಲಸಕ್ಕೆಂದು ಹೋದವನು ಸಂಜೆ ಮನೆಗೆ ಬಾರದೇ ಕಾಣೆಯಾಗಿದ್ದಾರೆ. ಈತನನ್ನು ಎಲ್ಲ ಕಡೆ ಹುಡುಕಾಡಿದರೂ ಹಾಗೂ ಸಂಬಂಧಿಕರ ಮನೆಯಲ್ಲಿಯೂ ಇವರ ಬಗ್ಗೆ ವಿಚಾರಿಸಿದರೂ ಪತ್ತೆಯಾಗಿಲ್ಲ.
ಚಹರೆ: ಗಿರೀಶ್ ಹುಟ್ಟು ಅಂಗವೈಕಲ್ಯಕ್ಕೊಳಗಾಗಿದ್ದು, ಸ್ವಲ್ಪ ಬಾಗಿಕೊಂಡು ನಡೆಯುತ್ತಿದ್ದರು. 5.3 ಅಡಿ ಎತ್ತರ, ಎಣ್ಣೆ ಕಪ್ಪು ಮೈ ಬಣ್ಣ, ಸಪೂರ ಶರೀರ, ಪರ್ಪಲ್ ಬಣ್ಣದ ಅಂಗಿ, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದರು. ತುಳು, ಮಲಯಾಳ, ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾರೆ. ಹಲ್ಲುಗಳಿಗೆ ವೈದ್ಯರು ಹಾಕಿದ ಸರಿಗೆ (ತಂತಿ) ಇರುತ್ತದೆ.
ನಾಪತ್ತೆಯಾದ ಯುವಕನ ಬಗ್ಗೆ ಮಾಹಿತಿ ತಿಳಿದುಬಂದಲ್ಲಿ ಕಂಕನಾಡಿ ನಗರ ಠಾಣೆ (0824- 2220529, 9480805354)ಯನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.
Next Story