ಮಂಗಳೂರು: ತುಟ್ಟಿಭತ್ಯೆ ಜಾರಿಗೊಳಿಸಲು ಒತ್ತಾಯಿಸಿ ಬೀಡಿ ಕಾರ್ಮಿಕ ಸಂಘಟನೆಯಿಂದ ಮುತ್ತಿಗೆ

ಮಂಗಳೂರು, ನ. 22: ಬೀಡಿ ಕಾರ್ಮಿಕರ 210 ರೂ. ಕನಿಷ್ಟ ಕೂಲಿ ಹಾಗೂ 2015-18ರ ರೂ.12.75 ತುಟ್ಟಿಭತ್ಯೆ ಜಾರಿ ಗೊಳಿಸಲು ಏಐಟಿಯುಸಿ ಮತು ಸಿಐಟಿಯುಸಿ ಕಾರ್ಮಿಕ ಸಂಘಟನೆಗಳ ಜಂಟಿ ಆಶ್ರಯದಲ್ಲಿ ನಗರದ ಗಣೇಶ್ ಬೀಡಿ ಕಂಪೆನಿಗೆ ಮುತ್ತಿಗೆ ಹಾಕಲಾಯಿತು.
ಈ ಸಂದರ್ಭ ಪ್ರತಿಭಟನೆಯನ್ನು ಉದ್ದೇಶಿಸಿ ಸಿಐಟಿಯು ಮುಖಂಡ ಜೆ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಕಳೆದ ಭಾರಿಯ ಕರ್ನಾಟಕ ರಾಜ್ಯ ಸರ್ಕಾರ ಕರ್ನಾಟಕ ಬೀಡಿ ಕಾರ್ಮಿಕರನ್ನು ಪರಿಷ್ಕರಿಸಿ 51ಎ ಸಮೀತಿಯ ಮೂಲಕ ಕಾರ್ಮಿಕ ಪ್ರತಿನಿಧಿ, ಮಾಲಿಕ ಪ್ರತಿನಿಧಿ ಹಾಗೂ ಸರ್ಕಾರದ ಪ್ರತಿನಿಧಿಗಳ ಸಮ್ಮುಖದಲ್ಲಿ ರಾಜ್ಯದ 6 ಲಕ್ಷ ಬೀಡಿ ಕಾರ್ಮಿಕರಿಗೆ 1ಸಾವಿರ ಬೀಡಿಗೆ 210 ಕನೀಷ್ಟ ಕೂಲಿ ನೀಡಬೇಕೆಂದು ಸರ್ವಾಣುಮತದಿಂದ ನಿರ್ಣಯವನ್ನು ಮಾಡಿದ್ದು. ಈ ಬಗ್ಗೆ ಬೀಡಿ ಮಾಲಕರು ಈವರೆಗೂ ಜಾರಿ ಮಾಡಿಲ್ಲಾ, ಬೀಡಿ ಕಾರ್ಮಿಕರು ಹಲವಾರು ಪ್ರತಿಭಟನೆಗಳನ್ನು ನಡೆಸಿದರೂ ಮಾಲಕರು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲಾ. ಇಂದಿನ ಮುತ್ತಿಗೆಯ ಫಲವಾಗಿ ಕಂಪೆನಿಯ ಮ್ಯಾನೇಜರ್ ಮಾಲಕರಿಗೆ ಮನವಿ ಮಾಡುತ್ತೇನೆಂದು ಆಶ್ವಾಶನೆ ನೀಡಿದ್ದಾರೆ. ಕೆಂದ್ರ ಸರಕಾರ ನೀತಿಯ ಬೆಲೆ ಏರಿಕೆಯಿಂದಾಗಿ ಕಾರ್ಮಿಕರಿಗೆ ಜೀವನ ನಡೆಸಲು ಕಷ್ಟವಾಗಿದೆ ಇದರಿಂದಾಗಿ ಮಾಲಕರು ಮುಂದಿನ ದಿನ ಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಮುಖಂಡರಾದ ಜಯಂತಿ ಬಿ ಶೆಟ್ಟಿ, ಭಾರತಿ ಬೋಳಾರ, ಬಾಬು ದೇವಾಡಿಗ ಹಾಗೂ ಏಐಟಿಯುಸಿ ಮುಖಂಡರಾದ ಸೀತಾರಾಮ್ ಬೆರಿಂಜ, ಕರುಣಾಕರ, ಸುಲೋಚನ ಕವತಾರ್, ಚಿತ್ರಾಕ್ಷಿ, ಗುಣಾವತಿ, ಎಚ್ ವಿ ರಾವ್, ವಿ ಕುಕ್ಯಾನ್, ಶಿವಪ್ಪ ಕೋಟ್ಯಾನ್ ಹಾಗೂ 500ಕ್ಕೂ ಅಧಿಕ ಬೀಡಿ ಕಾರ್ಮಿಕರು ಪಾಲ್ಗೊಂಡಿದ್ದರು.