ಕೊಲ್ಲರಕೋಡಿ: ಮೀಲಾದ್ ಕಾರ್ಯಕ್ರಮ

ನರಿಂಗಾನ, ನ.22: ನೂರುಲ್ ಹುದಾ ಮಸ್ಜಿದ್ ತಖ್ವಾ, ನೂರುಲ್ ಉಲೂಮ್ ಮದರಸ, ಎಸ್ಸೆಸ್ಸೆಫ್ ಕೊಲ್ಲರಕೋಡಿ ಶಾಖೆ ಇದರ ಆಶ್ರಯದಲ್ಲಿ ಮದರಸ ವಿದ್ಯಾರ್ಥಿಗಳ ಮೀಲಾದ್ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮೌಲೀದ್ ಪಾರಾಯಣ, ವಿದ್ಯಾರ್ಥಿ ಪುರಸ್ಕಾರ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬ್ದುಲ್ ರಝಾಕ್ ಪಾರೆ ವಹಿಸಿದ್ದರು.
ಮಂಜನಾಡಿ ಮುದರ್ರಿಸ್ ಪಿ.ಎ ಅಹ್ಮದ್ ಬಾಖವಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ಬಗ್ಗೆ ಉಪನ್ಯಾಸ ನೀಡಿದರು. ಕರೀಂ ಫೈಝಿ ಮಂಜನಾಡಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಈ ಸಂದರ್ಭ ಎಸ್ಸೆಸ್ಸೆಫ್ ಮಂಜನಾಡಿ ಸೆಕ್ಟರ್ ಅಧ್ಯಕ್ಷ ಇಬ್ರಾಹೀಂ ಅಹ್ಸನಿ, ಕೊಲ್ಲರಕೋಡಿ ಮದರಸ ಮುಅಲ್ಲಿಂ ಅಬ್ಬಾಸ್ ಸಖಾಫಿ, ಹಮೀದ್ ತಟ್ಲ, ನರಿಂಗಾನ ಗ್ರಾಪಂ ಸದಸ್ಯ ಅಬ್ದುಲ್ ಖಾದರ್ ಚೌಕ, ಇಬ್ರಾಹೀಂ ಹಾಜಿ ಪಾರೆ, ಮುಹಮ್ಮದ್ ಎನ್.ಐ, ಎನ್.ಎಂ ಅಬ್ದುಲ್ ರಹ್ಮಾನ್ ಹಾಜಿ ಮುಂತಾದವರು ಉಪಸ್ಥಿತರಿದರು.
ಕೊಲ್ಲರಕೋಡಿ ಸದರ್ ಉಮರ್ ಮದನಿ ಕಾರ್ಯಕ್ರಮ ನಿರೂಪಿಸಿದರು.
Next Story