ಕೋಡಿ ಬೀಚ್‌ನಲ್ಲಿ ‘ನಮ್ಮೂರ ಕೊಡಿಹಬ್ಬ’ ಮರಳು ಶಿಲ್ಪ

ಉಡುಪಿ, ನ. 22: ಕರಾವಳಿ ಭಾಗದ ಅತಿದೊಡ್ಡ ಮತ್ತು ಇತಿಹಾಸ ಪ್ರಸಿದ್ಧ ರಥೋತ್ಸವ ಎನಿಸಿದ ಕೋಟೇಶ್ವರದ ಶ್ರೀಕೋಟಿಲಿಂಗೇಶ್ವರ ದೇವಸ್ಥಾನದ ಕೊಡಿಹಬ್ಬದಲ್ಲಿ ನವದಂಪತಿಗಳು ಕಬ್ಬನ್ನು ಪ್ರಸಾದ ರೂಪವಾಗಿ ಸ್ವೀಕರಿಸುವ ಪದ್ಧತಿ ಇದೆ.
ಈ ಹಿನ್ನೆಲೆಯಲ್ಲಿ ಕಲಾವಿದ ಹರೀಶ್ ಸಾಗಾರ ನೇತೃತ್ವದಲ್ಲಿ ಸ್ಯಾಂಡ್ ಥೀಂ ಉಡುಪಿ ತಂಡದ ರಾಘವೇಂದ್ರ, ಜೈ ನೇರಳೆಕಟ್ಟೆ, ಪ್ರಸಾದ್ ಆರ್. ಕೋಟೇಶ್ವರ ಹಳೆ-ಅಳಿವೆ ಕೋಡಿ ಬೀಚ್‌ನಲ್ಲಿ 12 ಅಡಿ ಅಗಲ ಮತ್ತು 4.5 ಅಡಿ ಎತ್ತರದ ‘ನಮ್ಮೂರ ಕೊಡಿಹಬ್ಬ’ದ ಮರಳು ಶಿಲ್ಪವನ್ನು ರಚಿಸಿತು.
Next Story